suryakumar yadav – ಒಂದೇ ಏಟಿಗೆ ಮೂರು ದಾಖಲೆ ಬರೆದ ಸೂರ್ಯ
ಟೀಂ ಇಂಡಿಯಾದ ನಯಾ ಸೆನ್ಷೇನ್ ಸೂರ್ಯ ಕುಮಾರ್ ಯಾದವ್ ಟಿ 20 ಕ್ರಿಕೆಟ್ ನಲ್ಲಿ ಮುನ್ನುಗ್ಗುತ್ತಿದ್ದಾರೆ.
ಆಕ್ರಮಣಕಾರಿಯಾಟವೇ ಮೂಲ ಮಂತ್ರವಾಗಿಸಿಕೊಂಡಿರುವ ಸೂರ್ಯ ಆಟ ಎದುರಾಳಿ ಬೌಲರ್ ಗಳಿಗೆ ಭಯ ಹುಟ್ಟಿಸುವಂತೆ ಮಾಡಿದೆ.
ಸೂಪರ್ 12 ಗ್ರೂಪ್ 2 ಹಂತದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೂರ್ಯ ಮತ್ತೆ ಅಬ್ಬರಿಸಿದ್ರು.
ವಿರಾಟ್, ರೋಹಿತ್ ವೈಫಲ್ಯದ ನಡುವೆ ಕೆ.ಎಲ್.ರಾಹುಲ್ ಜೊತೆ ಸೇರಿ ಸೂರ್ಯ ಉತ್ತಮ ಇನ್ನಿಂಗ್ಸ್ ಕಟ್ಟಿದರು.
23 ಎಸೆತಗಳಲ್ಲಿ ಅರ್ಧಶತಕ ಸಾಧಿಸಿದ ಸೂರ್ಯ ಕುಮಾರ್, 25 ಎಸೆತಗಳಲ್ಲಿ 61 ರನ್ ಗಳಿಸಿ ನಾಟೌಟ್ ಆಗಿ ನಿಂತರು.
ಇದರೊಂದಿಗೆ ಸೂರ್ಯ ಕುಮಾರ್ ಒಂದೇ ಏಟಿಗೆ ಮೂರು ದಾಖಲೆಗಳನ್ನು ಬ್ರೇಕ್ ಮಾಡಿದ್ದಾರೆ.
ಟಿ 20 ವರ್ಲ್ಡ್ ಕಪ್ ನಲ್ಲಿ ಟೀಂ ಇಂಡಿಯಾ ಪರ ಅತ್ಯಂತ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚೂರಿ ಸಾಧಿಸಿದ ಪಟ್ಟಿಯಲ್ಲಿ ನಾಲ್ಕನೇಯವರಾಗಿದ್ದಾರೆ.
ಇದಕ್ಕೂ ಮುನ್ನಾ ಯುವರಾಜ್ ಸಿಂಗ್ 2007ರಲ್ಲಿ ಇಂಗ್ಲೆಂಡ್ ವಿರುದ್ಧ 12 ಎಸೆತಗಳಲ್ಲಿ, ಆಸ್ಟ್ರೇಲಿಯಾ ವಿರುದ್ಧ 20 ಎಸೆತಗಳಲ್ಲಿ ಅರ್ಧಶತಕ ಸಾಧಿಸಿದ್ದು, ಕೆ.ಎಲ್.ರಾಹುಲ್ 2021ರಲ್ಲಿ ಸ್ಕಾಟ್ಲೇಂಡ್ ವಿರುದ್ಧ 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ಜಿಂಬಾಬೆ ವಿರುದ್ಧದ ಪಂದ್ಯದಲ್ಲಿ ಸೂರ್ಯ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.
ಒಂದು ಟಿ 20 ವಿಶ್ವಕಪ್ ನಲ್ಲಿ 100 ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿ ಅತ್ಯಧಿಕ ಸ್ಟ್ರೈಕ್ ರೇಟ್ ಹೊಂದಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ ಸೂರ್ಯ ಮೊದಲ ಸ್ಥಾನದಲ್ಲಿದ್ದಾರೆ.
2022ರ ಟಿ 20 ವಿಶ್ವಕಪ್ ನಲ್ಲಿ ಸೂರ್ಯ ಕುಮಾರ್ 193.96 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು ಟಿ 20 ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಪರ ಕೊನೆಯ ಓವರ್ ಗಳಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಸೂರ್ಯ ಮೂರನೇ ಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆ ವಿರುದ್ಧ ಸೂರ್ಯ ಕೊನೆಯ ಐದು ಓವರ್ ಗಳಲ್ಲಿ 56 ರನ್ ಗಳಿಸಿದ್ರು. ಇದಕ್ಕೂ ಮೊದಲು ಏಷ್ಯಾಕಪ್ ನಲ್ಲಿ 2022ರಲ್ಲಿ ಅಫ್ಗಾನ್ ವಿರುದ್ಧ ಕೊಹ್ಲಿ 63 ರನ್ ಗಳಿಸಿದ್ದರು.
2007ರ ಟಿ 20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಯುವರಾಜ್ ಸಿಂಗ್ 58 ರನ್ ಗಳನ್ನು ದಾಖಲಿಸಿದ್ದರು.








