Mumbai indians | ಮುಂಬೈ ಇಂಡಿಯನ್ಸ್ ತಂಡಕ್ಕೆ ಭಾರಿ ಆಘಾತ..!
2022 ರ ಐಪಿಎಲ್ ಶುರುವಾಗುವುದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ ಎದುರಾಗಿದೆ.
ಗಾಯದ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ದೂರವಾಗಿದ್ದ ಮುಂಬೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಇನ್ನೂ ಚೇತರಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.
ಹೀಗಾಗಿ ಅವರು ಕ್ಯಾಶ್ ರಿಚ್ ಲೀಗ್ ನಲ್ಲಿ ಮಾರ್ಚ್ 27 ರಂದು ಡೆಲ್ಲಿ ವಿರುದ್ಧ ನಡೆಯಲಿರುವ ಪಂದ್ಯದಿಂದ ದೂರ ಇರುವ ಸಾಧ್ಯತೆಗಳಿವೆ.
ಕಳೆದ ಕೆಲವು ವರ್ಷಗಳಿಂದ ಸೂರ್ಯಕುಮಾರ್ ಯಾದವ್, ಮುಂಬೈ ತಂಡದ ಪ್ರಮುಖ ಭಾಗವಾಗಿದ್ದರು.
ಕಳೆದ ವರ್ಷ ಅವರು ಉತ್ತಮ ಪ್ರದರ್ಶನ ನೀಡಿದ್ದು, ಅವರನ್ನ ಮುಂಬೈ ಫ್ರಾಂಚೈಸಿ 8 ಕೋಟಿಗೆ ರಿಟೈನ್ಡ್ ಮಾಡಿಕೊಂಡಿದೆ.
ಇತ್ತ ಕಳೆದ ವರ್ಷದ ಐಪಿಎಲ್ ಪ್ರದರ್ಶನದಿಂದಾಗಿ ಅವರು ಟೀಂ ಇಂಡಿಯಾ ಪ್ರವೇಶಿಸಿದ್ದು, ಅಲ್ಲದೇ ತಂಡದಲ್ಲಿ ಸ್ಥಾನ ಗಟ್ಟಿ ಪಡಿಸಿಕೊಂಡಿದ್ದಾರೆ.
ಭಾರತದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಮಿಡಲ್ ಆರ್ಡರ್ ಬ್ಯಾಟರ್ ಆಗಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್, ಉತ್ತಮ ಪ್ರದರ್ಶನ ನೀಡಿದ್ದರು.
ಇದಾದ ಬಳಿಕ ಲಂಕಾ ವಿರುದ್ಧದ ಸರಣಿಯ ಭಾಗವಾಗಿ ಪ್ರಾಕ್ಟೀಸ್ ಮಾಡುವಾಗ ಸೂರ್ಯ ಕುಮಾರ್ ಯಾದವ್ ಗಾಯಗೊಂಡಿದ್ದರು.
ಹೀಗಾಗಿ ಅವರು ತಂಡದಿಂದ ದೂರ ಉಳಿದರು. ಆದ್ರೆ 31 ವರ್ಷದ ಸೂರ್ಯಕುಮಾರ್ ಇನ್ನೂ ಚೇತರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಹೀಗಾಗಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
suryakumar-yadav-likely-miss-mumbai-indians-opener