ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಣದ ದಿ ಕಪಿಲ್ ಶರ್ಮಾ ಶೋ ಬಹಿಷ್ಕರಿಸಲು ಸುಶಾಂತ್ ಅಭಿಮಾನಿಗಳ ಕರೆ
ಮುಂಬೈ, ಅಗಸ್ಟ್25: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ನಿರ್ಮಾಪಕರಾಗಿರುವ ದಿ ಕಪಿಲ್ ಶರ್ಮಾ ಶೋ ನಿಷೇಧಿಸುವಂತೆ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಬಹಿಷ್ಕರಿಸಲು ಕರೆ ಕೊಟ್ಟಿದ್ದಾರೆ.

ಜಸ್ಟೀಸ್ ಫಾರ್ ಸುಶಾಂತ್ ಸಿಂಗ್ ರಜಪೂತ್ # ಎಸ್ಎಸ್ಆರ್ ಎಂಬ ಫೇಸ್ಬುಕ್ ಗುಂಪಿನಲ್ಲಿ ಸೋಮವಾರ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು, ಆತ್ಮೀಯ ಸದಸ್ಯರೇ, ಕಪಿಲ್ ಶರ್ಮಾ ಪ್ರದರ್ಶನವನ್ನು ಸಂಪೂರ್ಣವಾಗಿ ಬಹಿಷ್ಕರಿಸೋಣ ಎಂದು ಕರೆ ಕೊಟ್ಟಿದ್ದಾರೆ.
ಆತ್ಮೀಯ ಎಸ್ಎಸ್ಆರ್ ಕುಟುಂಬ, ಸಲ್ಮಾನ್ ಖಾನ್ ದಿ ಕಪಿಲ್ ಶರ್ಮಾ ಶೋನ ಸಹ-ನಿರ್ಮಾಪಕ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ನಾವು ಅವರ ಚಲನಚಿತ್ರಗಳನ್ನು ಮಾತ್ರವಲ್ಲ, ಅವರನ್ನು ಪ್ರತಿಯೊಂದು ಕೋನಗಳಿಂದ ಸಂಪೂರ್ಣವಾಗಿ ಎಲ್ಲೆಡೆಯಿಂದ ಬಹಿಷ್ಕರಿಸೋಣ ಎಂದು ಫೇಸ್ಬುಕ್ ಗುಂಪಿನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಗುಂಪಿನಲ್ಲಿ ಪ್ರಸ್ತುತ 91,000 ಸದಸ್ಯರಿದ್ದಾರೆ. ಹಾಸ್ಯ ಕಾರ್ಯಕ್ರಮವನ್ನು ಬಹಿಷ್ಕರಿಸುವ ಕರೆಗೆ ಹಲವಾರು ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.






