ಮುಂಬೈ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಮೈದುನನ ಸಾವಿನ ಸುದ್ದಿ ಕೇಳಿ ಆಘಾತಕ್ಕೆ ಒಳಗಾಗಿದ್ದ ಸುಶಾಂತ್ ಸಿಂಗ್ ಅತ್ತಿಗೆ ಸುಧಾದೇವಿ ಮೃತಪಟ್ಟಿದ್ದಾರೆ.
ಭಾನುವಾರ ಸುಶಾಂತ್ ಸಿಂಗ್ ಅವರ ನಿಧನದ ಸುದ್ದಿ ಕೇಳಿ ಅನ್ನಾಹಾರ ಬಿಟ್ಟಿದ್ದ ಸುಧಾದೇವಿ ಮಾನಸಿಕ ಆಘಾತಕ್ಕೆ ಒಳಗಾಗಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಇತ್ತ ಮುಂಬೈನಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆಯುತ್ತಿದ್ರೆ, ಅತ್ತ ಬಿಹಾರಾ ಪೂರ್ಣಿಯಾದಲ್ಲಿ ಅತ್ತಿಗೆ ಸುಧಾ ನಿಧನರಾಗಿದ್ದಾರೆ. ಸುಶಾಂತ್ ಚಿಕ್ಕಪ್ಪನ ಮಗನ ಪತ್ನಿ ಸಾವನ್ನಪ್ಪಿರೋದು ಕುಟುಂಬಕ್ಕೆ ಮತ್ತೊಂದು ದೊಡ್ಡ ಆಘಾತವನ್ನುಂಟು ಮಾಡಿದೆ. ಇನ್ನು ಸುಶಾಂತ್ ಆತ್ಮಹತ್ಯೆ ಸುದ್ದಿ ಕೇಳಿ ತಂದೆ ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.
ಭಾನುವಾರ ಫ್ಯಾನಿಗೆ ನೇಣು ಹಾಕಿಕೊಂಡು ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಸೋಮವಾರ ಸಂಜೆ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆದಿತ್ತು. ಶ್ರದ್ಧಾ ಕಪೂರ್, ಕೃತಿ ಸನನ್, ರಿಯಾ ಚಕ್ರವರ್ತಿ, ವಿವೇಕ್ ಒಬೇರಾಯ್, ರಾಜಕುಮಾರ್ ಹಿರಾಣಿ ಹಾಗೂ ಸುಶಾಂತ್ ಕುಟುಂಬದವರು ಮಾತ್ರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರು.