ಬಗೆದಷ್ಟು ಆಳಕ್ಕೆ ಹೊಸ ಹೊಸ ವಿಚಾರಗಳು ಬಯಾಲಾಗುತ್ತಿರುವ ಸುಶಾಂತ್ ಸಾವಿನ ಪ್ರಕರಣ ಸದ್ಯಕ್ಕೆ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ. ಸುಶಾಂತ್ ಪ್ರೇಯಸಿ ರಿಯಾಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ದಿನೇ ದಿನೇ ಅನುಮಾನಿತರ ಲಿಸ್ಟ್ ಗೆ ಹೊಸ ಹೊಸ ಹೆಸರುಗಳು ಸೇರಿಕೊಳ್ತಿವೆ. ಈಗಾಗಲೇ ಹಲವರ ಒತ್ತಡಗಳಿಗೆ ಮಣಿದು ಈ ಪ್ರಕರವಣನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ.
ನಿನ್ನೆಯಷ್ಟೇ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರದ ಮಾಜಿ ಸಿಎಂ ನಾರಾಯಣ ಠಾಣೆ ಇಬ್ಬರು ನಟರತ್ತ ನೇರವಾಗಿ ಬೊಟ್ಟು ಮಾಡಿ ತೋರಿಸಿ ಅವರನ್ನೂ ವಿಚಾರಣೆ ಮಾಡಲೇ ಬೇಕು ಎಂದು ಕುತೂಹಲ ಮೂಡಿಸಿದ್ರು. ಈ ಮೂಲಕ ಅನುಮಾನಿತರ ಪಟ್ಟಿಗೆ ಬಾಲಿವುಡ್ ನಟರಾದ ಸೂರಜ್ ಪಾಂಚೋಲೆ, ಡಿನೋ ಮೊರಿಯಾ ಆಡ್ ಆಗಿದ್ರು. ನೆಪೋಟಿಸಮ್ ಇಂದು ಹಿಡಿದು ಮೋವಿ ಮಾಫಿಯಾ, ರಾಜಕೀಯದ ಬಣ್ಣ ಪಡೆದುಕೊಂಡಿರುವ ಪ್ರಕರಣಕ್ಕೆ ಅಂಡರ್ಗ್ರೌಂಡ್ ಲಿಂಕ್ ಇದೆ ಎಂಬ ಹೊಸ ಟ್ವಿಸ್ಟ್ ಸಿಕ್ಕಿದೆ.
ಎಸ್ ಈ ಆರೋಪ ಮಾಡಿರುವುದು ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ. ಸುಶಾಂತ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಶಿಫಾರಸು ಮಾಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿರುವ ಅವರು, ನಿತೀಶ್ ಕುಮಾರ್, ಜನರ ಭಾವನೆಗಳನ್ನು ಅರಿತುಕೊಂಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದು ಕೊಲೆ ಎಂದು ಬಿಹಾರ ವಿಧಾನಸಭೆಯಲ್ಲಿ ಅವಿರೋಧವಾಗಿ ಸಿಬಿಐ ತನಿಖೆಗೆ ಆಗ್ರಹಿಸಲಾಗಿತ್ತು ಎಂದು ಹೇಳಿದ್ದಾರೆ.
ಇದರ ಬೆನ್ನಲ್ಲೇ ಅಚ್ಚರಿಸು ಮೂಡಿಸುವಂತಹ ಹೇಳಿಕೆ ನೀಡಿರುವ ಮಾಂಝಿ ಅವರು ಸುಶಾಂತ್ ಪ್ರೇಯಸಿ ಎಂದು ಹೇಳಿಕೊಂಡಿರುವ ರಿಯಾ ಚಕ್ರವರ್ತಿಗೆ ಭೂಗತ ಲೋಕದ ಸಂಪರ್ಕವಿರಬಹುದು ಎಂದು ಆರೋಪ ಮಾಡಿದ್ದಾರೆ.ಇದೇ ವೆಳೆ
ಮುಂಬೈ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಂಝಿ ಮಹಾರಾಷ್ಟ್ರ ಪೊಲೀಸರಲ್ಲಿ ತಪ್ಪಿತಸ್ಥ ಭಾವನೆ ಕಾಡುತ್ತಿದೆ. ಹೀಗಾಗಿ ಅವರು ಈ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ.ಹೀಗಾಗಿಯೇ ಇದೀಗ ಬಿಹಾರ ಪೊಲೀಸರು ಪ್ರಕರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.







