ಇಂದು ದಿ. ಸುಶಾಂತ್ ಸಿಂಗ್ ಹುಟ್ಟುಹಬ್ಬ : ತಾರೆಯರಿಂದ ಬಾವನಾತ್ಮಕ ಸಂದೇಶ ರವಾನೆ..!
ಬಾಲಿವುಡ್ ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ನಮ್ಮನ್ನೆಲ್ಲ ಅಗಗಲಿ 7 ತಿಂಗಳಾಗಿದೆ. ಇಂದು ಸುಶಾಂತ್ ಸಿಂಗ್ ಅವರ 35ನೇ ವರ್ಷದ ಜನ್ಮದಿನ. ಈ ದಿನದಂದು ಕುಟುಂಬಸ್ಥರು ಸಿನಿಮಾರಂಗದ ಅನೇಕರು ಸುಶಾಂತ್ ಅಭಿಮಾನಿಗಳು ಅವರನ್ನ ನೆನೆದು ಭಾವುಕರಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಭಾವನಾತ್ಮಕ ಸಂದೇಶಗಳನ್ನ ರವಾನಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಸುಶಾಂತ್ ಹುಟ್ಟುಹಬ್ಬದ ಸವಿನೆನಪಿನ ದಿನವನ್ನು ‘ಸುಶಾಂತ್ ಸಿಂಗ್ ದಿನ’, ‘ಎಸ್ ಎಸ್ ಆರ್’ ದಿನ ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಇನ್ನೂ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಾಂಡೆ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ‘ಸುಶಾಂತ್ ಸಿಂಗ್ ಹಾಡಿಗೆ ಹೆಜ್ಜೆ ಹಾಕಿ ಭಾವುಕರಾಗಿದ್ದಾರೆ. ‘ಇದು ತುಂಬಾ ಕಷ್ಟದ ಸಮಯ. ತುಂಬಾ ನೋವಾಗುತ್ತೆ’ ಎಂದು ಡ್ಯಾನ್ಸ್ ವಿಡಿಯೋ ಶೇರ್ ಮಾಡಿ ಮಾಜಿ ಪ್ರಿಯತಮನನ್ನು ನೆನಪಿಸಿಕೊಂಡಿದ್ದಾರೆ. 
ಸುಶಾಂತ್ ಸಾವಿನ ಪ್ರಕರಣದ ನಂತರದಿಂದಲೂ ಈ ಪ್ರಕರಣಕ್ಕೆ ಅನೇಕರನ್ನ ಹೊಣೆಯಾಗಿಸಿಜಕೊಂಡು ರಾಜಕಾರಣಿಗಳು ಸಿನಿಮಾರಂಗದ ದೊಡ್ಡ ದೊಡ್ಡ ಮಂದಿ ವಿರುದ್ಧ ಆರೋಪ ಮಾಡುತ್ತಲೇ ಸುದ್ದಿಯಲ್ಲಿದ್ದ ನಟಿ ಅಂದ್ರೆ ಅದು ಕಂಗನಾ ರಣಾವತ್. ಅವರು ಸಹ ಟ್ವೀಟ್ ಮಾಡಿದ್ದು, ‘ಆತ್ಮೀಯ ಸುಶಾಂತ್, ಮೂವಿ ಮಾಫಿಯಾ ನಿಮ್ಮನ್ನು ಬ್ಯಾನ್ ಮಾಡಿತ್ತು ಮತ್ತು ತುಂಬಾ ಕಿರುಕುಳ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ನೀವು ಅನೇಕ ಬಾರಿ ಸಹಾಯ ಕೇಳಿದ್ದೀರಿ. ನಿಮಗಾಗಿ ಇಲ್ಲದಿರುವುದಕ್ಕೆ ವಿಷಾದಿಸುತ್ತೇನೆ. ಮಾಫಿಯಾ ನೀಡಿದ ಹಿಂಸೆಯನ್ನು ನಿಭಾಯಿಸಲು ನೀವು ಸಾಕಷ್ಟು ಕಷ್ಟಪಟ್ಟಿದ್ದೀರಿ. ಹುಟ್ಟುಹಬ್ಬದ ಶುಭಾಶಯಗಳು’ ಎಂದು ಹೇಳಿದ್ದಾರೆ.
ಇನ್ನೂ ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ಸಿಂಗ್ ಸಹ, ‘ಸಹೋದರನ ಜೊತೆ ಇರುವ ಸುಂದರ ಫೋಟೋಗಳನ್ನು ಹಂಚಿಕೊಂಡು, ಲವ್ ಯೂ…. ನೀನು ಯಾವಾಗಲು ನಮ್ಮ ಜೊತೆ ಇರುತ್ತೀಯ’ ಎಂದು ಬರೆದುಕೊಂಡಿದ್ದಾರೆ. ಸುಶಾಂತ್ ಸಿಂಗ್ 2020 ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಸಾವಿನಿಂದ ಅಭಿಮಾನಿಗಳಿಗೆ ಆಗಾತ ಉಂಟಾಗಿತ್ತು. ಈವರೆಗೂ ಇದು ಕೊಲೆಯೂ , ಆತ್ಮಹತ್ಯೆಯೋ ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲೇ ಹೋದ ಪ್ರಕರಣದ ತನಿಖೆ ಇನ್ನೂ ನಡೆಯುತ್ತಲೇ ಇದೆ.
ಮಾಜಿ ಸೈನಿಕರು ಸಾರ್ವಜನಿಕ ಸಮಾರಂಭಗಳಲ್ಲಿ ಬ್ಯಾಡ್ಜ್/ಪದಕಗಳನ್ನು ಧರಿಸುವಂತಿಲ್ಲ !
60 ನಿಮಿಷಗಳಲ್ಲಿ ನಾನ್-ವೆಜ್ ಥಾಲಿ ತಿನ್ನಿ – ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಗೆಲ್ಲಿ !
ಜ್ವರದ ತಾಪಮಾನವನ್ನು ತ್ವರಿತವಾಗಿ ತಗ್ಗಿಸಲು ಪರಿಣಾಮಕಾರಿ ಮನೆಮದ್ದು
ಮೂರು ಭಾಷೆ.. ಸಾವಿರ ಬೆಳ್ಳಿ ಪರದೆ ಮೇಲೆ ಪೊಗರು ತೋರಿಸಲಿದ್ದಾರೆ ಧೃವ ಸರ್ಜಾ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








