Sushanth Singh : ‘ಆತ್ಮಹತ್ಯೆ ಅಲ್ಲ ಮರ್ಡರ್’ ವರ್ಷಗಳ ನಂತರ ಅವರು ಬಾಯ್ಬಿಟ್ಟ ಸತ್ಯ
ಸುಮಾರು 2 ವರೆ ವರ್ಷಗಳ ಹಿಂದೆ ಬಾಲಿವುಡ್ ನಲ್ಲಿ ಮಾತ್ರವೇ ಅಲ್ಲ ಇಡೀ ದೇಶಾದ್ಯಂತ ಬೆಂಕಿ ಬಿರುಗಾಳಿ ಎಬ್ಬಿಸಿದ್ದು , ಬಾಲಿವುಡ್ ಅಂತ್ಯಕ್ಕೆ ನಾಂದಿ ಹಾಡಿದ್ದು ಸುಶಾಂತ್ ಸಿಂಗ್ ಅವರ ನಿಧನ..
ಮೇಲ್ನೋಟಕ್ಕೆ ಆತ್ಮಹತ್ಯೆ ಆಗಿತ್ತು.. ಆದ್ರೆ ಿದು ಕೊಲೆ ಎಂಬ ಆರೋಪ ಕೇಳಿಬಂದಿತ್ತು.. ಸುಶಾಂತ್ ಸಾವಿನ ಪ್ರಕರಣ ಹಿಂದೆ ಸಾಕಷ್ಟು ವಿಚಾರಗಳು ಬಟಾ ಬಯಲಾಯ್ತು.. ಬಾಲಿವುಡ್ ಕರಾಳ ಚೆಹರೆ ಜನರಿಗೆ ಗೊತ್ತಾಯ್ತು.. ಅಲ್ಲಿಂದ್ಲೇ ನೋಡಿ ಬಾಯ್ಕಾಟ್ ಕಾಟವೂ ಶುರುವಾಯ್ತು..
ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಲವರು ಹೇಳಿದ್ದರೆ, ಅವರು ಆತ್ಮಹತ್ಯೆ ಅಲ್ಲ ಎಂದು ಅವರ ಕುಟುಂಬ ವಾದಿಸಿತ್ತು. ಈ ವಾದ ವಿವಾದಗಳು ಇಂದಿಗೂ ನಡೆಯುತ್ತಲೇ ಇವೆ. ಆದರೆ, ಈವರೆಗೂ ಅವರ ಮರಣೋತ್ತರ ಅಂತಿಮ ವರದಿ ಬಂದಿಲ್ಲ. ಇದೀಗ ಈ ಪ್ರಕರಣಕ್ಕೆ ಹೊಸ ತಿರುವು ಬಂದಿದ್ದು, ಇದು ಆತ್ಮಹತ್ಯೆ ಅಲ್ಲ ಮರ್ಡರ್ ಎನ್ನುವ ಆಘಾತಕಾರಿ ವಿಷಯವನ್ನು ಶವಪರೀಕ್ಷೆಯ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ. ಈ ಮಾತು ಬಾಲಿವುಡ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸುಶಾಂತ್ ಸಿಂಗ್ ಶವಪರೀಕ್ಷೆ ನಡೆಸಿದ ಸಿಬ್ಬಂದಿಗಳಲ್ಲಿ ರೂಪಾ ಕುಮಾರ್ ಶಾ ಎಂಬುವವರು ವರ್ಷಗಳ ನಂತರ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ.. ಅವತ್ತು ನಮ್ಮ ಮುಂದೆ ಐದಾರು ಶವಗಳು ಇದ್ದವು. ನಾವು ಅವುಗಳನ್ನು ಪೋಸ್ಟ್ ಮಾರ್ಟಂ ಮಾಡಬೇಕಿತ್ತು. ಅದರಲ್ಲಿ ಒಂದು ವಿಐಪಿ ಶವ ಅಂತ ಗೊತ್ತಾಯಿತು. ಬೇಗ ಬೇಗ ಶವಪರೀಕ್ಷೆ ಮಾಡುವಂತೆ ನಮಗೆ ಸೂಚಿಸಲಾಯಿತು. ಆನಂತರ ನಮಗೆ ಗೊತ್ತಾಗಿದ್ದು ಅದು ಸುಶಾಂತ್ ಸಿಂಗ್ ಅವರ ಶವ ಅಂತ. ದೇಹದ ಮೇಲೆ ಹಲವು ಗುರುತುಗಳು ಇದ್ದವು. ಕುತ್ತಿಗೆ ಮೇಲೂ ಇದ್ದವು ಎಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಅವರ ಇದೇ ಹೇಳಿಕೆ ಇದೀಗ ಸಂಚಲವನ್ನೇ ಸೃಷ್ಟಿ ಮಾಡಿದೆ.. ಮತ್ತೆ ವಬಾಲಿವುಡ್ ಗೆ ಢವ ಢವ ಶುರುವಾಗಿದೆ..
ಸುಶಾಂತ್ ಸಿಂಗ್ ಶವ ಪರೀಕ್ಷೆ ಮಾಡುವಾಗ ತಮಗೆ ಒತ್ತಡವೂ ಇತ್ತು ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ. ಶವಪರೀಕ್ಷೆ ಮಾಡುವಾಗ ರೆಕಾರ್ಡ್ ಮಾಡಿಕೊಳ್ಳಬೇಕಾಗುತ್ತದೆ. ಆದರೆ, ಸುಶಾಂತ್ ಅವರದ್ದು ಕೇವಲ ಫೋಟೋ ಮಾತ್ರ ತಗೆಯಲಾಯಿತು. ರಾತ್ರೋರಾತ್ರಿ ಪೋಸ್ಟ್ ಮಾರ್ಟಂ ಮಾಡಿ ಶವವನ್ನು ಪೊಲೀಸನವರಿಗೆ ಹಸ್ತಾಂತರಿಸಿದೆವು ಎಂದೂ ಅವರು ಮಾತನಾಡಿದ್ದಾರೆ.