ಸುಶಾಂತ್ ಸಾವಿನ ನಂತರ ನ್ಯಾಯಕ್ಕಾಗಿ ಸಿಬಿಐ ಗೆ ಕೇಸ್ ಒಪ್ಪಿಸುವಂತೆ ಒತ್ತಾಯಿಸಿದ್ದ ನೆಟ್ಟಿಗರು ಇದೀಗ ಹೊಸದೊಂದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸಿಬಿಐಗೆ ಪ್ರಕರಣ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದ್ದ ನೆಟ್ಟಿಗರು ಇದೀಗ ಲಂಡನ್ನ ಮೇಡಮ್ ಟುಸ್ಸಾಡ್ಸ್ ಮೇಣದ ಮ್ಯೂಸಿಯಂನಲ್ಲಿ ಸುಶಾಂತ್ ಸಿಂಗ್ ಮೇಣದ ಪ್ರತಿಮೆ ಇಡಬೇಕು ಎಂದು ಆಗ್ರಹಿಸಿದ್ದಾರೆ.
ಭಸುಂದರ್ ಜೋಷ್ ಹಾಗೂ ಸೋಫಿ ರೆಹಮ್ ಎಂಬಾತರು change.org ನಲ್ಲಿ ಆನ್ಲೈನ್ ಹೊಸದೊಂದು ಪೆಟಿಷನ್ ಶುರುಮಾಡಿದ್ದಾರೆ. ಅಲ್ಲದೇ ಈ ಮೇಣದ ಪ್ರತಿಮೆಯಿಂದ ಸುಶಾಂತ್ ಅವರ ನೆನಪು ಸದಾ ಮನದಲ್ಲಿರಲಿದೆ ಎಂದಿದ್ದಾರೆ. ಈ ಆನ್ಲೈನ್ ಪೆಟಿಷನ್ಗೆ ಈಗಾಗಲೇ 50 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹವಾಗಿದೆ.









