ಹಾಲಿ ಭುವನ ಸುಂದರಿಗೆ ಅಭಿನಂದಿಸಿದ ಮಾಜಿ ಭುವನ ಸುಂದರಿಯರು.
ಹರ್ನಾಜ್‌ಗೆ ಅಭಿನಂದನೆ: ಭಾರತಕ್ಕಾಗಿ 21 ವರ್ಷಗಳ ನಂತರ ಭುವನ ಸುಂದರಿ ಪಟ್ಟವನ್ನು ಗೆದ್ದುಕೊಂಡ ಹರ್ನಾಜ್ ಸಂಧು ಗೆ ಸುಶ್ಮಿತಾ, ಲಾರಾ ಮತ್ತು ಪ್ರಿಯಾಂಕಾ ಅಭಿನಂದನೆಗನ್ನ ಸಲ್ಲಿಸಿದ್ದಾರೆ….
ಭಾರತದ ಹರ್ನಾಜ್ ಸಂಧು ಭುವನ ಸುಂದರಿ ಪಟ್ಟ ಗೆದ್ದಿದ್ದಾರೆ. 21 ವರ್ಷಗಳ ಬಳಿಕ ಭಾರತೀಯ ಸುಂದರಿಯೊಬ್ಬರು ಈ ಪಟ್ಟ ಅಲಂಕರಿಸಿದ್ದಾರೆ. ಇದರೊಂದಿಗೆ ಮಿಸ್ ಯೂನಿವರ್ಸ್ ಪಟ್ಟವನ್ನು ಗೆದ್ದ ಮೂರನೇ ಭಾರತೀಯ ಸುಂದರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
https://www.instagram.com/p/CXauidgt8Rk/?utm_source=ig_embed&ig_rid=c1ed4241-56e6-4a00-9f47-084ec80c085e
ಹರ್ನಾಜ್‌ಗಿಂತ ಮೊದಲು, 2000 ರಲ್ಲಿ ಲಾರಾ ದತ್ತಾ ಮತ್ತು 1994 ರಲ್ಲಿ ಸುಶ್ಮಿತಾ ಸೇನ್ ಭಾರತಕ್ಕೆ ವಿಶ್ವ ಸುಂದರಿ ಪಟ್ಟವನ್ನು ನೀಡಿದರು. 70ನೇ ಭುವನ ಸುಂದರಿ ಸ್ಪರ್ಧೆಯನ್ನು ಡಿಸೆಂಬರ್ 12 ರಂದು ಇಸ್ರೇಲ್‌ನಲ್ಲಿ ಆಯೋಜಿಸಲಾಗಿತ್ತು. ಹರ್ನಾಜ್ ಅವರ ಈ ಗೆಲುವಿಗೆ ಸುಶ್ಮಿತಾ ಸೇನ್, ಲಾರಾ ದತ್ತಾ, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಗಣ್ಯರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಅಭಿನಂದಿಸಿದ್ದಾರೆ.
Congratulations @HarnaazSandhu03 !!!! Welcome to the club!!! We’ve waited 21 long years for this!!! You make us SO SO proud!!! A billion dreams come true!!! @MissDivaOrg @MissUniverse
— Lara Dutta Bhupathi (@LaraDutta) December 13, 2021
ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ಹರ್ನಾಜ್ ಸಂಧು. ಅಭಿನಂದನೆಗಳು ಮಿಸ್ ಯೂನಿವರ್ಸ್ ಕಿರೀಟವು 21 ವರ್ಷಗಳ ನಂತರ ಭಾರತಕ್ಕೆ ಮರಳಿದೆ. ಮಿಸ್ ಯೂನಿವರ್ಸ್ ನಿಮಗೆ ನೀಡುವ ಅದ್ಭುತವಾದ ಜಾಗತಿಕ ವೇದಿಕೆಯಿಂದ ನೀವು ಬಹಳಷ್ಟು ಕಲಿಯಬಹುದು. ಪ್ರತಿ ಕ್ಷಣವನ್ನು ನೀವು ಆನಂದಿಸುತ್ತೀರಿ ಎಂದು ಭಾವಿಸುತ್ತೇವೆ. ನನ್ನ ಪ್ರೀತಿ ಮತ್ತು ನಿಮ್ಮ ಅಭಿನಂದನೆಗಳು… ಎಂದು ಸುಶ್ಮಿತ ಸೇನ್ ಅಭಿನಂದನೆ ಸಲ್ಲಿಸಿದ್ದಾರೆ.
And the new Miss Universe is… Miss India ✨👏🏽
Congratulations @HarnaazSandhu03 … bringing the crown home after 21 years! https://t.co/sXtZzrNct8
— PRIYANKA (@priyankachopra) December 13, 2021
ಅಭಿನಂದನೆಗಳು ಹರ್ನಾಜ್ ಸಂಧು, ಕ್ಲಬ್‌ಗೆ ಸ್ವಾಗತ ಎಂದು ಇನ್ನೊಬ್ಬ ಭುವನ ಸುಂದರಿ ಲಾರಾ ದತ್ತಾ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ
ಪ್ರಿಯಾಂಕಾ ಚೋಪ್ರಾ ಪೋಸ್ಟ್ ಹಂಚಿಕೊಂಡಿದ್ದಾರೆ ಮತ್ತು “ಮತ್ತು ಹೊಸ ಭುವನಸುಂದರಿ … ಮಿಸ್ ಇಂಡಿಯಾ ಅಭಿನಂದನೆಗಳು ಹರ್ನಾಜ್ ಸಂಧು. 21 ವರ್ಷಗಳ ನಂತರ ತಾಜ್ ಅನ್ನು ಮನೆಗೆ ತರುತ್ತಿದ್ದಾರೆ” ಎಂದು ಬರೆದಿದ್ದಾರೆ.








