ಮೊತ್ತೊಂದು ಮಗು ದತ್ತು ಪಡೆದ ಮಾಜಿ ವಿಶ್ವ ಸುಂದರಿ ಸುಷ್ಮಿತಾ ಸೇನ್..!
ಸುಷ್ಮಿತಾ ಸೇನ್… ಮಾಜಿ ವಿಶ್ವ ಸುಂದರಿ.. ಇವರು ನೋಡಲಷ್ಟೇ ಬ್ಯೂಟಿ ಅಲ್ಲ… ಇವರ ಇನ್ನರ್ ಬ್ಯೂಟಿ ಇವರನ್ನ ರಿಯಲ್ ಬ್ಯೂಟಿಯಾಗಿಸಿದೆ. ವಿಶ್ವ ಸುಂದರಿ ಪಟ್ಟ ತಂದುಕೊಟ್ಟಿದ್ದು ಇವರ ವಿಚಾರಧಾರೆಗಳೇ..
ಅಂದ್ಹಾಗೆ ಸುಷ್ಮಿತಾ ಅತಿ ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳನ್ನ ದತ್ತು ಪಡೆದ ವಿಚಾರ ಎಲ್ರಿಗೂ ಗೊತ್ತಿದೆ.. ಇತರ ನಟಿಯರಿಗೆ ಅವರು ಮಾದರಿಯಾಗಿದ್ದಾರೆ.. ಆದ್ರೆ ಇತ್ತೀಚೆಗಷ್ಟೇ ಅವರು ತಮ್ಮ ಬಾಯ್ ಫ್ರೆಂಡ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.. ಅದಾದ ಕೆಲ ದಿನಗಳ ನಂತರ ಈಗ ಸುಷ್ಮಿತಾ ಮತ್ತೊಂದು ಗಂಡು ಮಗುವನ್ನ ದತ್ತು ಪಡೆದಿದ್ದಾರೆ..
ಈಗಾಗಲೇ ಸುಷ್ಮಿತಾ ಇಬ್ಬರು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಾ ಇದ್ದಾರೆ. ಈಗ ಮೂರನೇ ಮಗುವನ್ನು ದತ್ತು ಪಡೆದಿದ್ದಾರೆ. ಸುಷ್ಮಿತಾಳ ಈ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಬಹುಕಾಲದಿಂದ ಸುಷ್ಮಿತಾ, ರೋಹ್ಮನ್ ಶಾಲ್ ಜೊತೆಗೆ ಲಿವ್ ಇನ್ ರಿಲೇಷನ್ನಲ್ಲಿ ಇದ್ದರು. ಆದರೆ ಇತ್ತೀಚೆಗೆ ಅವರು ಆತನಿಂದ ದೂರ ಆಗಿದ್ದಾರೆ. ಈ ವಿಚಾರವನ್ನು ಸುಷ್ಮಿತಾ ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತವಾಗಿ ತಿಳಿಸಿದ್ದರು.. ಸ್ಪಷ್ಟಪಡಿಸಿದ್ದರು.
ತಮ್ಮ ಇಬ್ಬರು ದತ್ತು ಮಕ್ಕಳಾದ ರೀನಾ ಮತ್ತು ಅಲಿಸಾ ಜೊತೆಗೆ ತನ್ನ ಗಂಡು ಮಗುವಿನ ಜೊತೆಗೆ ಫೊಟೋಗೆ ಪೋಸ್ ಕೊಟ್ಟಿದ್ದಾರೆ ಸುಷ್ಮಿತಾ ಸೇನ್. ನಟಿ ಸುಷ್ಮಿತಾ ಸೇನ್ ತನಗೆ 24 ವರ್ಷ ಇದ್ದಾಗ ಮೊದಲ ಮಗು ರೀನಾಳನ್ನು ದತ್ತು ಪಡೆದಿದ್ದಾರೆ. ಅದು 2000 ಇಸವಿಯಲ್ಲಿ. ನಂತರ 2010ರಲ್ಲಿ ಎರಡನೇ ಮಗು ಅಲಿಸಾಳನ್ನು ದತ್ತು ಪಡೆದಿದ್ದಾರೆ. ಈಗ 11 ವರ್ಷದ ಬಳಿಕ ಗಂಡು ಮಗುವನ್ನು ಸುಷ್ಮಿತಾ ದತ್ತು ಪಡೆದುಕೊಂಡಿದ್ದಾರೆ.