ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್ ವಿಚಾರಣೆಯಿಂದ ದಿನದಿಂದ ದಿನಕ್ಕೆ ಸ್ಫೋಟಕ ಮಾಹಿತಿಗಳು ಬಹಿರಂಗಗೊಳ್ಳುತ್ತಿವೆ. ರನ್ಯಾ ಸಾವಿರಾರು ಕೋಟಿಗಳಷ್ಟು ಅಕ್ರಮ ಚಿನ್ನ ಸಾಗಾಟ ನಡೆಸಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಜಾಲದಲ್ಲಿ ರಾಜ್ಯದ ಪ್ರಭಾವಿ ಸಚಿವರೊಬ್ಬರ ಕೈವಾಡವಿರುವ ಶಂಕೆ ಉಂಟಾಗಿದೆ.
ಮಾಹಿತಿಯ ಪ್ರಕಾರ, ಈ ಸಚಿವರು ನಟಿ ರನ್ಯಾ ರಾವ್ ಅವರ ಆಪ್ತ ಸ್ನೇಹಿತರಾಗಿದ್ದು, ಅವರ ಮದುವೆಯಲ್ಲಿಯೂ ಭಾಗಿಯಾಗಿದ್ದರು. ಆಕೆಯ ಬಂಧನದ ನಂತರ, ಸಚಿವರು ಪ್ರಕರಣ ಮುಚ್ಚಿಹಾಕಲು ಹತ್ತಾರು ಪ್ರಯತ್ನ ಮಾಡಿದರೂ, DRI (Directorate of Revenue Intelligence) ಅಧಿಕಾರಿಗಳು ಯಾವುದೇ ರಾಜಕೀಯ ಒತ್ತಡಕ್ಕೂ ಮಣಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಿಸುತ್ತಿದ್ದ ಸಂದರ್ಭದಲ್ಲಿ ರನ್ಯಾ ರಾವ್ ಸಿಕ್ಕಿಬಿದ್ದಿದ್ದಾರೆ. ಅವರ ಬಂಧನದ ನಂತರ, ತನಿಖಾ ಸಂಸ್ಥೆಗಳಿಗೆ ಹೆಚ್ಚಿನ ಪ್ರಮುಖ ಮಾಹಿತಿಗಳು ಲಭ್ಯವಾಗುತ್ತಿದ್ದು, ಇಡೀ ಅಕ್ರಮ ಚಿನ್ನ ಸಾಗಾಟ ಜಾಲದ ಹಿಂದಿನ ಬೃಹತ್ ರಚನೆ ಬೆಳಕಿಗೆ ಬರಲು ಸಾಧ್ಯವೆಂದು ಮೂಲಗಳು ಹೇಳುತ್ತಿವೆ.
ಈ ಪ್ರಕರಣವು ರಾಜ್ಯ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಚಿವರು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ತಿರುವು ಪಡೆಯಬಹುದಾ? ನಿಮ್ಮ ಅಭಿಪ್ರಾಯ ಏನು? ಕಾಮೆಂಟ್ ಮಾಡಿ!