ತುಳುನಾಡಿನ ಕಾರಣೀಕ ಶಕ್ತಿ ಸ್ವಾಮಿ ಕೊರಗಜ್ಜ Saakshatv tulunadu episode1
ಕಡಲಪುಡೆತ ಉಡಲಗೇನ ತುಡರ್ ಈ ಅಜ್ಜ… ಆ ಸತ್ಯದ ಹಾದಿಗ್… ಧರ್ಮೊದ ಸಾದಿಗ್ ಪುದರ್ ಕೊರಗಜ್ಜ…
ತುಳುನಾಡಿನಲ್ಲಿ ದೈವಗಳು ತುಳುವರ ಮನೆ-ಮನಸ್ಸಿನಲ್ಲಿ ನೆಲೆಗೊಂಡಿರುವ ಕಾರಣೀಕ ಶಕ್ತಿಗಳು. Saakshatv tulunadu episode1
ಬದುಕಿಗೆ ಭರವಸೆ, ಭದ್ರತೆ ಮತ್ತು ಸಮಾಧಾನವನ್ನು ನೀಡಿರುವ ಈ ದೈವಗಳ ಜೊತೆ ತುಳುವರಿಗೆ ಭಕ್ತಿಯೊಂದಿಗೆ ಒಂದು ರೀತಿಯ ಸಲುಗೆಯ ಸಂಬಂಧವಿದೆ. ಹಾಗಾಗಿ ದೈವಗಳನ್ನು ಇಲ್ಲಿ ಏಕವಚದಲ್ಲೇ ಸಂಭೋದಿಸಲಾಗುತ್ತದೆ. ವೃದ್ಧರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಇಷ್ಟ ಪಡುವ ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಾರಣೀಕ ದೈವ.
ಬೆಲೆ ಬಾಳುವ ವಸ್ತು ಕಳೆದು ಹೋದರೆ ಕೊರಗಜ್ಜನಿಗೆ ಸಾರಾಯಿ ಕೊಡುತ್ತೇನೆ ಎಂದು ಹರಕೆ ಹೇಳಿದರೆ ಕಾಣೆಯಾದ ವಸ್ತು ಪತ್ತೆಯಾಗುತ್ತದೆ. ಆರೋಗ್ಯ ಸಮಸ್ಯೆ ಅಥವಾ ದನಕರುಗಳಿಗೆ ಏನಾದರೂ ತೊಂದರೆಯಾದರೆ ತುಳುನಾಡಿನ ಜನರು ಕೊರಗಜ್ಜನ ಮೊರೆ ಹೋಗುತ್ತಾರೆ.
ಕೊರಗಜ್ಜನ ಮೂಲಸ್ಥಾನ ಮಂಗಳೂರು ಸಮೀಪದ ಕುತ್ತಾರು.
ಪಾಡ್ದನ ಪ್ರಕಾರ ಪಣಂಬೂರಿನ ಓಡಿ ಮತ್ತು ಅಚ್ಚು ಮೈರದಿ ಎಂಬ ಕೊರಗ ದಂಪತಿಗಳಿಗೆ ಜನಿಸಿದ ಮಗುವೇ ತನಿಯ ಕೊರಗ. 30 ದಿನಗಳ ಶಿಶುವಾಗಿದ್ದಾಗ ತಂದೆ ತಾಯಿಯನ್ನು ಕಳೆದುಕೊಂಡ ತನಿಯ ಬಳಿಕ ಸೇಂದಿ ಮಾರುವ ಹೆಂಗಸು ಮೈರಕ್ಕೆ ಬೈದತಿಯ ಆಶ್ರಯದಲ್ಲಿ ಬೆಳೆಯುತ್ತಾನೆ.
ಬಾಲ್ಯದಿಂದಲೇ ತನ್ನ ಅಸಾಮಾನ್ಯ ಕೆಲಸಗಳಿಂದ ಪ್ರಸಿದ್ಧನಾಗಿದ್ದ ತನಿಯ ಕೊರಗ ಹಣ್ಣು ಕೊಯ್ಯಲು ಹೋದವ ಅಲ್ಲಿಂದ ಮಾಯವಾಗುತ್ತಾನೆ ಎಂಬ ವಿವರ ತುಳುನಾಡಿನ ಪಾಡ್ದನದಲ್ಲಿ ಬರುತ್ತದೆ. ಮುಂದೆ ಆತ ತನ್ನ ನೆಲದ ಜನರನ್ನು ಕಾಯುವ ಭರವಸೆ ನೀಡಿದ.
ಮಂಗಳೂರಿನ ಕುತ್ತಾರು ಕಟ್ಟೆಯ ಬಳಿ ಕೊರಗಜ್ಜನ ಸಾನಿಧ್ಯವಿದೆ. ಈ ಕಟ್ಟೆಯ ಬಳಿ ಸಂಜೆಯ ನಂತರ ಯಾವುದೇ ಬೆಂಕಿ ಕಿಡಿಯನ್ನು ಹೊತ್ತಿಸಬಾರದು ಎಂಬ ನಿಯಮವಿದೆ. ವಾಹನಗಳು ಆ ರಸ್ತೇಲಿ ದೀಪ ಹಾಕದೆ ಬರುತ್ತಾರೆ. ಯಾರಾದರೂ ನಿಯಮ ಮೀರಿದರೆ ಅವರಿಗೆ ಕೆಡುಕು ಆಗಿರುವುದಕ್ಕೆ ಅನೇಕ ಉದಾಹರಣೆಗಳಿವೆ.
ಡೆಕ್ಕಾರು, ಬೊಲ್ಯ,ಸೋಮೇಶ್ವರ, ದೇರಳಕಟ್ಟೆ, ಕುತ್ತಾರು ಮೂಲಸ್ಥಾನ ಸೇರಿದಂತೆ ಒಟ್ಟು 7 ಸ್ಥಳಗಳಲ್ಲಿ 7 ಕಲ್ಲಿನಲ್ಲಿ ಶ್ರದ್ಧೆ ಭಕ್ತಿಯಿಂದ ಪೂಜಿಸಲಾಗುತ್ತದೆ.
ಕೊರಗಜ್ಜನ ಕಟ್ಟೆಗಳಲ್ಲಿ ಹರಕೆಯ ಅಗೇಲು ಸೇವೆ ಮತ್ತು ಕೋಲಗಳನ್ನು ನಡೆಸಲಾಗುತ್ತದೆ. ಹುರುಳಿ, ಬಸಳೆ, ಮೀನು, ಕೋಳಿ, ಉಪ್ಪಿನಕಾಯಿ, ಚಕ್ಕುಲಿ, ಸೇಂದಿ, ಮದ್ಯ, ತಾಂಬೂಲವನ್ನು ಅಗೆಲು ಸೇವೆಯಲ್ಲಿ ಬಡಿಸಲಾಗುತ್ತದೆ.
ಕೊರಗಜ್ಜನ ಕೋಲದಲ್ಲಿ ತಲೆಗೆ ಮುಟ್ಟಾಳೆ, ಸೊಂಟಕ್ಕೆ ಗೆಜ್ಜೆಯ ಪಟ್ಟಿ, ಮೈ ತುಂಬಾ ಮಸಿ ಬಳಿದು ಕೈಯಲ್ಲಿ ಬೆತ್ತವನ್ನು ಹಿಡಿದು ನರ್ತನ ಮಾಡಲಾಗುತ್ತದೆ. ಮತ್ತು ಪಾಡ್ದನ ಪ್ರಮುಖ ಪಾತ್ರವಹಿಸುತ್ತದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಮೇಲಿನ ಕಥೆ ಪಾಡ್ದನ ಆಧಾರಿತವಾಗಿದ್ದು, ತಮ್ಮದೇ ಆದ ಸಂಸ್ಕ್ರತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ತುಳುನಾಡಿನಲ್ಲಿ ತುಳುನಾಡಿನ ಎಲ್ಲಾ ದೈವಗಳ ಇತಿಹಾಸವು ಅಲಿಖಿತವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1357889181113024515?s=19
https://twitter.com/SaakshaTv/status/1358257880034648067?s=19