ಒಕ್ಕಲಿಗರ ಸಂಘದ ಚುನಾವಣೆಯ ಪ್ರಚಾರದ ವೈಖರಿಗೆ ನಂಜಾವಧೂತ ಸ್ವಾಮೀಜಿ ಬೇಸರ
ತುಮಕೂರು : ರಾಜ್ಯ ಒಕ್ಕಲಿಗರ ಸಂಘದ ಚುನಾವಣಾ ಕಾವು ರಂಗೇರಿದೆ. ಈ ಹಿಂದೆ ಎಂದೂ ಇಲ್ಲದೇ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ ಬೇಸರ ಹೊರಹಾಕಿದ್ದಾರೆ. Ocaligara Sangha saaksha tv
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಕಲಿಗರ ಸಂಘದ ಚುನಾವಣೆಯ ಪ್ರಚಾರದ ವೈಖರಿ ಬೇಸರ ತರಿಸಿದೆ. ಚುನಾವಣಾ ವ್ಯವಸ್ಥೆ ಮಾದರಿಯಾಗಿರಬೇಕು.
ನಮ್ಮ ಬದುಕಿನ ಭವಿಷ್ಯವನ್ನು ಸುಸ್ತಿರವಾಗಿಡಬೇಕಾದವರು ಒಕ್ಕಲಿಗ ಸಂಘದ ನಿರ್ದೇಶಕರಾಗಿರುತ್ತಾರೆ. ಇಂತಹವರು ಹೇಗೆ ಇರಬೇಕು ಎಂದು ಆಲೋಚಿಸಬೇಕಿದೆ. ಅವರು ಭ್ರಷ್ಟರಾದರೆ ಸಂಘವನ್ನು ಭ್ರಷ್ಟತೆಯ ಕೂಪಕ್ಕೆ ತಳ್ಳುತ್ತಾರೆ ಎಂದು ಅಭಿಪ್ರಾಯಟ್ಟಿದ್ದಾರೆ.
ಇದೇ ವೇಳೆ ಮತದಾರರಿಗೆ ಕಿವಿ ಮಾತನ್ನ ಹೇಳಿರುವ ಸ್ವಾಮೀಜಿಗಳು.. ಸದಸ್ಯರು ಚಲಾಯಿಸುವ ಮತ ಸಮುದಾಯವನ್ನು ಹೊಸದಿಕ್ಕಿನ ಕಡೆಗೆ ತೆಗೆದುಕೊಂಡು ಹೋಗುವಂತಹದ್ದು. ಹೀಗಾಗಿ ಸಮುದಾಯದ ಬಗ್ಗೆ ಬದ್ಧತೆಯುವಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಿದೆ ಎಂದಿದ್ದಾರೆ.








