ಕೋಲಾರ : ಸೇವಾಶ್ರಮ ಹೆಸರಿನಲ್ಲಿ ಮಠಕಟ್ಟಲು ಬಂದಿದ್ದ ಸ್ವಾಮೀಜಿ ಪ್ರೇಮಪಾಶಕ್ಕೆ ಬಿದ್ದು, 19 ವರ್ಷದ ಯುವತಿಯನ್ನು ಕರೆದುಕೊಂಡು ಓಡಿ ಹೋಗಿ ತಿರುಪತಿಯಲ್ಲಿ ಮದುವೆಯಾಗಿರುವ ಘಟನೆ ಕೋಲಾರ ಹೊಳಲಿಯಲ್ಲಿ ನಡೆದಿದೆ. ಸಂಕ್ರಾಂತಿ ಹಬ್ಬದಂದು ಸೇವಾಶ್ರಮ ಪೀಠಾ ಸ್ಥಾಪಿಸಿ ದತ್ತಾತ್ರೇಯ ಅವಧೂತ ಸ್ವಾಮೀಜಿ ಎಂದು ಹೆಸರು ಇಟ್ಟುಕೊಂಡು ಪೀಠಾಧ್ಯಕ್ಷ ಪದವಿ ಏರಿದ್ದ ಸ್ವಾಮೀಜಿ, ಎರಡು ತಿಂಗಳಿನಿಂದ ಮಠದಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದರು. ಈ ವೇಳೆ, ಮಠಕ್ಕೆ ಬರುತ್ತಿದ್ದ ಯುವತಿಯ ಮೇಲೆ ಸ್ವಾಮೀಜಿಗೆ ಪ್ರೇಮವಾಗಿದೆ. ಇದನ್ನು ಆಕೆಯ ಬಳಿ ಹೇಳಿದ ಸ್ವಾಮೀಜಿ, ಯುವತಿಯನ್ನು ಪುಸಲಾಯಿಸಿ ಆಕೆಯೊಂದಿಗೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಇವರಿಗಾಗಿ ಹುಡುಕಾಟ ಶುರುವಾಗಿದ್ದು, ಯುವತಿಯ ಕುಟುಂಬದವರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ನಡುವೆಯೇ ಸ್ವಾಮೀಜಿ ಯುವತಿಯ ಸಹೋದರನಿಗೆ ಕರೆ ಮಾಡಿದ್ದು, ಯುವತಿಯನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಪೋಲಿಸರಿಗೆ ದೂರು ಕೊಡಬೇಡಿ ನಿಮ್ಮ ಜೊತೆಯಲ್ಲಿ ನಾನಿರುತ್ತೇನೆ ಎನ್ನುವ ಸಂಭಾಷಣೆಯನ್ನು ಕಳುಹಿಸಿದ್ದಾರೆ. ಇದೇ ವೇಳೆ, ಸ್ವಾಮೀಜಿ ನಿನ್ನ ತಂಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಬೆಂಗಳೂರಿನಲ್ಲಿ ಮನೆ ಮಾಡಿ ಎಲ್ಲವೂ ಸರಿಹೋದಮೇಲೆ ಗ್ರಾಮಕ್ಕೆ ಬರುವುದಾಗಿ ತಿಳಿಸಿದ್ದಾರಂತೆ
ದುಷ್ಟ ಗ್ರಹಗಳನ್ನು ತೊಡೆದುಹಾಕಲು ಹನುಮಾನ್ ಮಂತ್ರ
ದುಷ್ಟ ಗ್ರಹಗಳಿಂದ ನಿಮ್ಮ ಜೀವನದಲ್ಲಿ ಎಂದಿಗೂ ದುಃಖ ಇರುವುದಿಲ್ಲ. ಹನುಮಂತನ ಈ ತಾರಕ ಮಂತ್ರವನ್ನು ಒಮ್ಮೆ ಪಠಿಸಿದರೂ ಸಹ ಗ್ರಹಗಳು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಕುಟುಂಬಕ್ಕೆ...








