ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಮಧ್ಯೆ, ಸಿಎಎ ವಿರೋಧಿ ಪ್ರತಿಭಟನಾಕಾರರ ಹಿಂಸಾಚಾರವು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ತೀವ್ರ ಸ್ವರೂಪವನ್ನು ಪಡೆದಿದೆ.
ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು ಕಾನ್‌ಸ್ಟೆಬಲ್ ರತನ್ ಲಾಲ್ ಮೇಲೆ ಹಲ್ಲೆ ನಡೆಸಿದ್ದರಿಂದ ಕಾನ್‌ಸ್ಟೆಬಲ್ ಪ್ರಾಣ ಕಳೆದುಕೊಂಡಿದ್ದಾನೆ. 7 ಮಂದಿ ನಾಗರಿಕರು ಸಹ ಸಾವನ್ನಪ್ಪಿದ್ದು, 105 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಘರ್ಷಣೆಯ ಸಮಯದಲ್ಲಿ ಅನೇಕ ವಾಹನಗಳು, ಅಂಗಡಿಗಳು ಮತ್ತು ಮನೆಗಳು ಸುಟ್ಟುಹೋಗಿದ್ದು, ಭಜನ್‌ಪುರ ಪ್ರದೇಶದಲ್ಲಿ ಪ್ರತಿಭಟನಾಕಾರರು ಪೆಟ್ರೋಲ್ ಪಂಪ್ ಅನ್ನು ಸಹ ಸುಟ್ಟಿದ್ದಾರೆ. ಪ್ರತಿಭಟನಾಕಾರರು ಅಗ್ನಿಸ್ಪರ್ಶ ಮಾತ್ರವಲ್ಲ ಹಲವೆಡೆ ಕಲ್ಲು ತೂರಾಟ ಕೂಡ ನಡೆಸಿದ್ದಾರೆ.
ಸಿಎಎ-ಎನ್‌ಆರ್‌ಸಿ ಮೇಲೆ ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು ಹರಡಿದ ತಪ್ಪು ಮಾಹಿತಿ, ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಪ್ರಮುಖ ಪಾತ್ರವಹಿಸಿತು.ಕೇಂದ್ರ ಗೃಹ ಸಚಿವರು ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಕೂಡ ಸಭೆ ನಡೆಸಿದ್ದಾರೆ.
ಚುನಾವಣಾ ನೀತಿಯಲ್ಲಿ ಬದಲಾವಣೆ; ಕಾಂಗ್ರೆಸ್ ಆಕ್ಷೇಪ
ನವದೆಹಲಿ: 1961ರ ಚುನಾವಣಾ ನೀತಿ ನಿಯಮಗಳಿಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಚುನಾವಣಾ ಪ್ರಕ್ರಿಯೆಯ ಸಮಗ್ರತೆ ವೇಗವಾಗಿ ಕುಸಿಯುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ...