ಮದುವೆಗೂ ಮುನ್ನವೇ ತಾಯಿಯಾಗಲಿದ್ದಾರೆ ನಟಿ ಸ್ವರಾ..!
ಮುಂಬೈ : ಬಾಲಿವುಡ್ ನ ಸ್ಟಾರ್ ನಟಿ ಸ್ವರಾ ಭಾಸ್ಕರ್ ಸದ್ಯದಲ್ಲೇ ಮದುವೆಯಾಗ್ತಾಯಿದ್ದಾರೆ.. ಆದ್ರೆ ಈ ಸುದ್ದಿ ಸಖತ್ ಸಂಚಲನ ಸೃಷ್ಟಿ ಮಾಡಿದೆ.. ಯಾಕಂದ್ರೆ ಎಲ್ರಿಗೂ ಗೊತ್ತೇ ಇರೋ ಹಾಗೆ ಸ್ವರಾ ಭಾಸ್ಕರ್ ಅವರಿಗೆ ಈವರೆಗೂ ಮದುವೆಯಾಗಿಲ್ಲ.. ಅಂದ್ಹಾಗೆ ಈ ನಟಿ ಮಗುವಿಗೆ ಜನ್ಮ ನೀಡ್ತಿಲ್ಲ. ಬದಲಾಗಿ ಮಗುವನ್ನ ದತ್ತು ಪಡೆಯುವ ಮೂಲಕ ಾ ಮಗುವಿಗೆ ಹೊಸ ಜೀವನ ನೀಡಲು ಮುಂದಾಗಿದ್ದಾರೆ..
ಸ್ವರ ಅವರ ಈ ನಡೆಗೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ. ಹೌದು ಸ್ವರಾ ಭಾಸ್ಕರ್ ದತ್ತು ಮಗುವನ್ನು ಪಡೆದುಕೊಳ್ಳಲು ಈಗಾಗಲೆ ಪ್ರಕ್ರಿಯೆ ಆರಂಭಿಸಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಸ್ವರಾ ಭಾಸ್ಕರ್ ಮಗುವಿನ ಜೊತೆಗೆ ಪ್ರತ್ಯಕ್ಷ ಆಗಲಿದ್ದಾರೆ.
ಮಗುವನ್ನು ದತ್ತು ಪಡೆಯುವ ಮುನ್ನ ಸ್ವರಾ ಭಾಸ್ಕರ್ ಸಾಕಷ್ಟು ಅನಾಥಾಶ್ರಮಗಳನ್ನು ಸುತ್ತಿದ್ದರು. ಅಲ್ಲದೇ ದತ್ತು ಮಕ್ಕಳನ್ನು ಪಡೆದಿರುವ ಸಾಕಷ್ಟು ಪೋಷಕರನ್ನೂ ಸ್ವರಾ ಭಾಸ್ಕರ್ ಭೇಟಿ ಮಾಡಿ ಮಾತನಾಡಿದ್ದರು. ಅಷ್ಟೇ ಅಲ್ಲ ನನ್ನ ಕನಸನ್ನು ನನಸಾಗಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಮಗುವನ್ನು ದತ್ತು ಪಡೆದುಕೊಳ್ಳುವುದು ಎಂದು ನಾನು ಭಾವಿಸುತ್ತೇನೆ ಎಂದು ಸಂದರ್ಶನ ಒಂದರಲ್ಲಿ ಸ್ವರಾ ಭಾಸ್ಕರ್ ಹೇಳಿ ಕೊಂಡಿದ್ದರು.
ಅಲ್ಲದೇ ನಮ್ಮ ದೇಶದಲ್ಲಿ ಒಂಟಿ ಮಹಿಳೆಯರಿಗೆ ಮಕ್ಕಳನ್ನು ದತ್ತು ಪಡೆಯಲು ಅವಕಾಶ ನೀಡಿರುವುದು ಅದೃಷ್ಟ. ಇದರಿಂದಾಗಿ ಮಗುವನ್ನು ದತ್ತು ಪಡೆದ ಅನೇಕ ದಂಪತಿಗಳನ್ನು ನಾನು ಭೇಟಿ ಮಾಡಿದ್ದೇನೆ. ಅನೇಕ ಮಕ್ಕಳು ಈಗ ವಯಸ್ಕರಾಗಿದ್ದಾರೆ. ಅವರ ಪ್ರಕ್ರಿಯೆ ಮತ್ತು ಅನುಭವದ ಬಗ್ಗೆ ನಾನು ವ್ಯಾಪಕ ಸಂಶೋಧನೆ ಮಾಡಿದ್ದೇನೆ ಎಂದಿದ್ದಾರೆ.
ಅಂದ್ಹಾಗೆ ಬಾಲಿವುಡ್ ನ ಅನೇಕ ನಟಿಯರು ಈಗಾಗಲೇ ಮಕ್ಕಳನ್ನ ದತ್ತು ಪಡೆದುಕೊಂಡಿದ್ದಾರೆ.. ಸುಶ್ಮಿತಾ ಸೇನ್ , ಸನ್ನಿ ಲಿಯೋನಿ , ರವೀನಾ ಟಂಡನ್ , ಕೂಡ ದತ್ತು ಮಕ್ಕಳನ್ನು ಪಡೆದಿದ್ದರು.