ಕಿರು ಉದ್ಯಮದಾರರಿಗೆ ಸಿಹಿ ಸುದ್ದಿ
ಹೊಸದಿಲ್ಲಿ, ಜೂನ್ 15: ಭಾರತ ಸರ್ಕಾರ ಸಣ್ಣ ಉದ್ಯಮ ಮಾಡುವವರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು. ಸಣ್ಣ ಉದ್ಯಮಗಳಲ್ಲಿ ಹಾಲಿನ ಉದ್ಯಮವೂ ಒಂದು. ಹಾಲಿನ ಉದ್ಯಮಕ್ಕೆ ನೀವು 5 ಲಕ್ಷ ಬಂಡವಾಳ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 60,000 ರೂಪಾಯಿ ಆದಾಯ ಗಳಿಕೆ ಮಾಡಬಹುದಾಗಿದೆ ಎಂದು ಅಂದಾಜಿಸಲಾಗಿದೆ.

ಇದೀಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಲಿನ ಉದ್ಯಮ ಮಾಡುವವರಿಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ರೂಪಿಸಿದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಮೂರು ಯೋಜನೆಯನ್ನು ರೂಪಿಸಲಾಗಿದೆ.
1) ಶಿಶು,
2) ಕಿಶೋರ್ ಮತ್ತು
3) ತರುಣ್
ಸಾಲ ಸೌಲಭ್ಯ :
ಡೈರಿ ಉದ್ಯಮ ಪ್ರಾರಂಭಿಸಲು ಸುಮಾರು 16 ಲಕ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಶಿಶು ಯೋಜನೆಯಡಿಯಲ್ಲಿ 50,000 ರೂಪಾಯಿ ವರೆಗೆ ಲೋನ್ ದೊರೆತರೆ,
ಕಿಶೋರ್ ಯೋಜನೆಯಡಿಯಲ್ಲಿ 50,000 ರೂಪಾಯಿಯಿಂದ 5 ಲಕ್ಷದ ವರೆಗೆ ಲೋನ್ ತೆಗೆದುಕೊಳ್ಳಬಹುದು.
ತರುಣ್ ಯೋಜನೆಯಡಿಯಲ್ಲಿ 5 ಲಕ್ಷದಿಂದ 10 ಲಕ್ಷದ ವರೆಗೆ ಲೋನ್ ಪಡೆಯಬಹುದಾಗಿದೆ.

ಬಂಡವಾಳ :
ರುಚಿಯಾದ ಹಾಲು, ಮೊಸರು, ಬೆಣ್ಣೆ ಹಾಲು ಮತ್ತು ತುಪ್ಪ ತಯಾರಿಸುವ ಮೂಲಕ ನೀವು ಉದ್ಯಮ ಪ್ರಾರಂಭಿಸಬಹುದು. ಈ ಯೋಜನೆಯನ್ನು ಪ್ರಾರಂಭಿಸಲು ನೀವು ಒಟ್ಟು ಸರಿ ಸುಮಾರು 16.5 ಲಕ್ಷ ರೂ ಗಳಷ್ಟು ಮೂಲ ಬಂಡವಾಳದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ, ಅದರಲ್ಲಿ ನೀವು 5 ಲಕ್ಷ ರೂಗಳನ್ನು ಬಂಡವಾಳವಾಗಿ ಹೂಡಿದರೆ, ಉಳಿದವುಗಳನ್ನು (70 ಪ್ರತಿಶತ) ಮುದ್ರಾ ಯೋಜನೆಯಡಿ ನೀಡಲಾಗುವುದು. ಬ್ಯಾಂಕುಗಳು ನಿಮ್ಮ 7.5 ಲಕ್ಷ ರೂ.ಗಳನ್ನು ಟರ್ಮ್ ಸಾಲವಾಗಿ ಮತ್ತು 4 ಲಕ್ಷವನ್ನು ವರ್ಕಿಂಗ್ ಕ್ಯಾಪಿಟಲ್ ಆಗಿ ನೀಡುತ್ತವೆ.
ವಹಿವಾಟು ಎಷ್ಟು?
ಹಾಲು, ಮೊಸರು, ಮಜ್ಜಿಗೆ ಮತ್ತು ತುಪ್ಪವನ್ನು ನೀವು ಮಾರಾಟ ಮಾಡಬಹುದು, ಇದನ್ನು ಬೇರೆ ಬೇರೆ ಅನುಪಾತದಲ್ಲಿ ತುಲನೆ ಮಾಡಿ ಹೆಚ್ಚಿನ ಆದಾಯ ತರುವ ಕಾಂಬಿನೇಷನ್ ಅನ್ನು ಸೂಕ್ತವಾಗಿ ಆಯ್ಕೆಮಾಡಿದಲ್ಲಿ ನಿಮಗೆ ವರ್ಷಕ್ಕೆ ಸುಮಾರು 75 – 85 ಲಕ್ಷ ರೂ ಆದಾಯಗಳಿಸಬಹುದು.
ನಿಮ್ಮ ವಾರ್ಷಿಕ ಹೂಡಿಕೆಯು ನಿಮ್ಮ ಸಾಲದ ಮೇಲೆ 14 ಪ್ರತಿಶತದಷ್ಟು ಬಡ್ಡಿ, ಖರ್ಚು ವೆಚ್ಚ ಸೇರಿದಂತೆ ತೊಂಬತ್ತು ಪ್ರತಿಶತ ಖರ್ಚಾದರೂ 7 .5 – 8 .5 ಲಕ್ಷ ರೂ. ಲಾಭ ಗಳಿಸಬಹುದು.
ಎಷ್ಟು ಪ್ರದೇಶ ಬೇಕಾಗುತ್ತದೆ?
ಹಾಲಿನ ಡೈರಿ ಯೋಜನೆಗಾಗಿ ನಿಮಗೆ 1000 ರಿಂದ 1500 ಚದರ ಅಡಿ ವಿಸ್ತೀರ್ಣದ ಪ್ರದೇಶ ಬೇಕಾಗುತ್ತದೆ, ಅದರಲ್ಲಿ 500 -700 ಚದರ ಅಡಿ ಸಂಸ್ಕರಣಾ ಪ್ರದೇಶಕ್ಕೆ, 150 -250 ಚದರ ಅಡಿ ಶೈತ್ಯೀಕರಣ ಕೋಣೆಗೆ, ತೊಳೆಯುವ ಪ್ರದೇಶಕ್ಕೆ 150 ರಿಂದ 200 ಚದರ ಅಡಿ, ಕಚೇರಿ ಪ್ರದೇಶಕ್ಕೆ 100 ರಿಂದ 150 ಚದರ ಅಡಿ ಮತ್ತು ಇತರ ಅಗತ್ಯಗಳಿಗೆ 100 ರಿಂದ 200 ಚದರ ಅಡಿ ಈ ಸಣ್ಣ ಪ್ರಮಾಣದ ಉದ್ಯಮ ಶುರು ಮಾಡಬಹುದಾಗಿದೆ.

ಯೋಜನೆಗೆ ಅಗತ್ಯವಾದ ಯಂತ್ರಗಳು:
ಪ್ಯಾಕಿಂಗ್ ಯಂತ್ರ, ಕ್ರೀಮ್ ವಿಭಜಕ, ಆಟೋಕ್ಲೇವ್, ಬಾಟಲಿಗಳು, ರೆಫ್ರಿಜರೇಟರ್, ಡೀಪ್ ಫ್ರೀಜರ್, ಕ್ಯಾನ್ ಕೂಲರ್, ತಾಮ್ರದ ಕೆಳಭಾಗದ ತಾಪನ ಹಡಗುಗಳು, ಸ್ಟೇನ್ಲೆಸ್ ಸ್ಟೀಲ್ ಸ್ಟೋರಿಂಗ್ ಹಡಗುಗಳು, ಪ್ಲಾಸ್ಟಿಕ್ ಟ್ರೇ, ವಿತರಕ, ಸ್ಲಾಟ್ ಕನ್ವೇಯರ್ ಇತ್ಯಾದಿಗಳು ಬೇಕಾಗುತ್ತವೆ.
ಒಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಈ ಉದ್ಯಮವನ್ನು ನಡೆಸಿದಲ್ಲಿ ಹಾಕಿದ ಬಂಡವಾಳಕ್ಕೆ ಉತ್ತಮ ಲಾಭದಾಯಕ ವ್ಯವಹಾರ ನಡೆಸಬಹುದು.








