ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸದಿಂದ ಕಳೆದ 40 ದಿನಗಳಿಂದ ದೇವಾಲಯಗಳನ್ನು ಮುಚ್ಚಲಾಗಿದ್ದು, ಇದೀಗ ರಾಯರ ಭಕ್ತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ರಾಯಚೂರಿನ ರಾಯರ ಮಠಕ್ಕೆ ಹೋಗಲಾಗದಿದ್ರೂ, ಭಕ್ತರು ಮನೆಯಲ್ಲೇ ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಬಹುದು.
ಹೌದು.. ಶೀಘ್ರದಲ್ಲೇ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠ ಬಾಗಿಲು ತೆರೆಯಲಿದೆ. ಆದ್ರೆ ಭಕ್ತರಿಗೆ ನೇರ ದರ್ಶನಕ್ಕೆ ಅವಕಾಶವಿಲ್ಲ. ಬದಲಾಗಿ ಆನ್ ಲೈನ್ ದರ್ಶನಕ್ಕೆ ಮುಜರಾಯಿ ಇಲಾಖೆ ಅನುಮತಿ ನೀಡಿದೆ.
ಆನ್ ಲೈನ್ ಸೇವೆ ಮಾಡಲಿಚ್ಛಿಸುವ ಭಕ್ತರು ಮಠದ ವೆಬ್ ಸೈಟ್‌ಗೆ ಹೋಗಿ, ಸೇವೆಗೆ ಬೇಕಾದ ಹಣ ಪಾವತಿಸಬೇಕು. ನಂತರ ನಿಗದಿತ ಸಮಯಕ್ಕೆ ಮಠದ ಫೇಸ್ ಬುಕ್ ಖಾತೆಯ ಮೂಲಕ ರಾಯರ ದರ್ಶನ ಪಡೆಯಬಹುದು. ಈ ಮೂಲಕ ರಾಯರ ಭಕ್ತರಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠ ಸ್ವಾಮಿಯ ದರ್ಶನದ ಅನುವು ಮಾಡಿಕೊಟ್ಟಿದೆ.







