ಸೈಯದ್ ಮೋದಿ ಇಂಟರ್ ನ್ಯಾಷನಲ್ : ಫೈನಲ್ ನಲ್ಲಿ ಸಿಂಧು-ಮಾಳವಿಕಾ ಸೆಣಸಾಟ Syed Modi International: final fight bitween PV Sindhu vs Malvika Bansod saaksha tv
ಸೈಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಸುತ್ತಿನಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರು ಮತ್ತೊಬ್ಬ ಭಾರತೀಯ ಆಟಗಾರ್ತಿ ಮಾಳವಿಕಾ ಅವರನ್ನು ಎದುರಿಸಲಿದ್ದಾರೆ.
ಶನಿವಾರ ಬಾಬು ಬನಾರಸಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತದ ಷಟ್ಲರ್ ರಷ್ಯಾದ ಎವ್ಗೆನಿಯಾ ಕೊಸೆಟ್ಸ್ಕಾಯಾ ಅವರನ್ನು ಮೊದಲ ಸೆಟ್ ನಲ್ಲಿ 21-11 ರಿಂದ ಸೋಲಿಸಿದರು.
ಇದಾದ ಬಳಿಕ ಪಂದ್ಯದ ನಡುವೆ ಕೊಸೆಟ್ಸ್ಕಾಯಾ ಅವರು ಗಾಯಗೊಂಡ ಕಾರಣದಿಂದಾ ಸಿಂಧು ನೇರವಾಗಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ. ಈ ಪಂದ್ಯಕ್ಕೂ ಮುನ್ನಾ ಕೊಸೆಟ್ಸ್ಕಾಯಾ ವಿರುದ್ಧ ಎರಡು ಪಂದ್ಯಗಳನ್ನಾಡಿದ್ದ ಸಿಂಧು, ಎರಡಲ್ಲೂ ಸೋಲುನಿಸಿದ್ದರು.
ಇನ್ನು ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಮಾಳವಿಕಾ ಬನ್ಸೋಡ್ ಅವರು ಭಾರತದವೇ ಆದ ಅನುಪಮಾ ಉಪಾಧ್ಯಾಯ ಅವರನ್ನು 19-21 21-19 21-7 ಸೆಟ್ ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.









