ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ: ಕರ್ನಾಟಕ ತಂಡ ಪ್ರಕಟ
ಬೆಂಗಳೂರು : ಹಾಲಿ ಚಾಂಪಿಯನ್ಸ್ ಕರ್ನಾಟಕ ತಂಡ ಮತ್ತೊಮ್ಮೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ಸ್ ಪಟ್ಟಕ್ಕೇರಲು ಸಿದ್ಧತೆ ಆರಂಭಿಸಿದೆ.
ಇಂದು ರಾಜ್ಯ ಕ್ರಿಕೆಟ್ ಸಂಸ್ಥೆ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರಕಟಿಸಿದ್ದು, ತಂಡಕ್ಕೆ ಅನುಭವಿ ಬ್ಯಾಟ್ಸ್ಮನ್ ಕರುಣ್ ನಾಯರ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ.
ಮೆಲ್ಬರ್ನ್ ನಲ್ಲಿ ಆಜಿಂಕ್ಯಾ ರಹಾನೆಯ ಶತಕದ ಆಲಾಪನೆ..!
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಜನವರಿ ಮೊದಲ ವಾರದಲ್ಲಿ ಆರಂಭವಾಗಲಿರಲಿದೆ.
ಟೂರ್ನಿಯಲ್ಲಿ ಕರ್ನಾಟಕ ತಂಡ ‘ಎ’ ಗುಂಪಿನಲ್ಲಿ ಪಂಜಾಬ್, ಉತ್ತರ ಪ್ರದೇಶ, ರೈಲ್ವೇಸ್, ಜಮ್ಮು-ಕಾಶ್ಮೀರ ಮತ್ತು ತ್ರಿಪುರಾ ತಂಡಗಳ ಎದುರು ಲೀಗ್ ಪಂದ್ಯಗಳನ್ನು ಆಡಲಿದೆ.
ಕರ್ನಾಟಕ ತಂಡ ಹೀಗಿದೆ
ಕರುಣ್ ನಾಯರ್ (ನಾಯಕ),ದೇವದತ್ತ್ ಪಡಿಕಲ್, ಪವನ್ ದೇಶಪಾಂಡೆ (ಉಪನಾಯಕ), ರೋಹನ್ ಕದಮ್, ಕೆವಿ ಸಿದ್ಧಾರ್ತ್, ಕೆಎಲ್ ಶ್ರೀಜಿತ್, ಬಿಆರ್ ಶರತ್, ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ಕೆ ಗೌತಮ್, ಜೆ ಸುಚಿತ್, ಪ್ರವೀಣ್ ದುಬೇ, ಅಭಿಮನ್ಯು ಮಿಥುನ್, ಪ್ರಸಿಧ್ ಕೃಷ್ಣ, ಪ್ರತೀಕ್ ಜೈನ್, ವಿ ಕೌಶಿಕ್, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಭಾಂಡಗೆ, ಶುಭಾಂಗ್ ಹೆಗ್ಡೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









