ಸಿರಿಯಾ ಸಂಘರ್ಷಕ್ಕೆ 10 ವರ್ಷಗಳಲ್ಲಿ 5 ಲಕ್ಷ ಮಂದಿ ಬಲಿ
ಸಿರಿಯಾದಲ್ಲಿ ದಶಕ ಕಾಲ ನಡೆದ ಯುದ್ಧದಲ್ಲಿ ಅಂದಾಜು 5 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನೂ ದಿನಗಳಲ್ಲೇ ಒಂದು ಲಕ್ಷಕ್ಕೂ ಅಧಿಕ ಮಂದಿ ಸಂಘರ್ಷಕ್ಕೆ ಬಲಿಯಾಗಿದ್ದಾರೆ ಎಂದು ಬ್ರಿಟನ್ ಮೂಲದ, ಸಿರಿಯಾ ಪ್ರಾಂತೀಯ ವೀಕ್ಷಕ ಸಂಸ್ಥೆಯು ಜೀವ ನಷ್ಟದ ಅಂದಾಜು ಮಾಡಿದೆ.
2011ರಲ್ಲಿ ಸರ್ಕಾರದ ವಿರುದ್ಧ ಬಂಡೆದ್ದವರ ಕ್ರೂರ ದಬ್ಬಾಳಿಕೆಯಿಂದಾಗಿ ಈ ವರೆಗೆ 494 ಮಂದಿ ಬೊಲಿಯಾಗಿದ್ದಾರೆ. ಮಾರ್ಚ್‌ನಲ್ಲಿ ಸಂಸ್ಥೆ ಬಿಡುಗಡೆ ಮಾಡಿದ್ದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆಯು ಕಡಿಮೆ ಆಗಿತ್ತು. ಆದರೆ, ಇತ್ತೀಚಿಗೆ ಲಭ್ಯವಾದ ದಾಖಲೆ, ಪತ್ರಗಳನ್ನು ಅಧ್ಯಯನ ಮಾಡಿರುವ ಸಂಸ್ಥೆಯು 1,05,015 ಸಾವುಗಳನ್ನು ಖಚಿತಪಡಿಸಿದೆ. ಅದರೊಂದಿಗೆ ಒಟ್ಟುಸಾವಿನ ಸಂಖ್ಯೆ ಹೆಚ್ಚು ಕಡಿಮೆ 5 ಲಕ್ಷ ಸಮೀಪಿಸಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.