ಅಗ್ರಸ್ಥಾನ ಕಳೆದುಕೊಂಡ ಭಾರತ
ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ನೀರಸ ಪ್ರದರ್ಶನ ನೀಡಿದ ಟೀಂ ಇಂಡಿಯಾ ದಕ್ಷಣಿ ಆಫ್ರಿಕಾ ವಿರುದ್ಧ ಸೋಲು ಕಂಡು ಅಗ್ರಸ್ಥಾನ ಕಳೆದುಕೊಂಡಿದೆ. ಪರ್ತ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ – ಟೀಂ ಇಂಡಿಯಾ ನಡುವಿನ ಪಂದ್ಯದಲ್ಲಿ ಭಾರತ ತಂಡ ಐದು ವಿಕೆಟ್ ಗಳಿಂದ ಸೋಲು ಕಂಡಿದೆ.
ಪರ್ತ್ ಮೈದಾನದಲ್ಲಿ ನಡೆದ ಗ್ರೂಪ್ 2ರ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 133 ರನ್ ಕಲೆ ಹಾಕಿತು. ದಕ್ಷಿಣ ಆಫ್ರಿಕಾ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.
134 ರನ್ಗಳ ಗೆಲುವಿನ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಅರ್ಷ್ ದೀಪ್ ಆಘಾತ ನೀಡಿದರು. ಆರಂಭಿಕಿರಾದ ಕ್ವಿಂಟಾನ್ ಡಿಕಾಕ್ (1 ರನ್) ಹಾಗೂ ರೀಲಿ ರೊಸೊ (0) ಎರಡನೇ ಓವರ್ ನಲ್ಲಿ ಪೆವಿಲಿಯನ್ ಸೇರಿಕೊಂಡರು. ನಾಯಕ ಟೆಂಬಾ ಬಾವುಮಾ 10 ರನ್ ಕಲೆ ಹಾಕಿ ಮೊಹ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು.
ನಾಲ್ಕನೆ ವಿಕೆಟ್ಗೆ ಜೊತೆಗೂಡಿದ ಏಡಿನ್ ಮಾರ್ಕ್ರಾಮ್ 52ರನ್ (ಎಸೆತ 41, 6 ಬೌಂಡರಿ 1 ಸಿಕ್ಸರ್) ಸಿಡಿಸಿದರು. ಡೇವಿಡ್ ಮಿಲ್ಲರ್ ಅಜೇಯ 59 ರನ್ (46 ಎಸೆತ, 4 ಬೌಂಡರಿ, 3 ಸಿಕ್ಸರ್). ಈ ಜೋಡಿ 76 ರನ್ ಸೇರಿಸಿ ದಕ್ಷಿಣ ಆಫ್ರಿಕಾ ಗೆಲುವನ್ನು ಪಕ್ಕಾ ಮಾಡಿತು. ಆದ್ರೆ 52 ರನ್ ಗಳಿಸಿದ್ದ ಏಡಿನ್ ಮಾರ್ಕ್ರಾಮ್ ಸೂರ್ಯ ಕುಮಾರ್ಗೆ ಕ್ಯಾಚ್ ನೀಡಿ ಹೊರ ನಡೆದರು. ಟ್ರಿಸ್ಟನ್ ಸ್ಟಬ್ಸ್ (6 ರನ್) ಅಶ್ವಿನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಅಂತಿಮ ಓವರ್ ನಲ್ಲಿ ಎರಡು ಬೌಂಡರಿ ಸಿಡಿಸಿ ದಕ್ಷಿಣಾಫ್ರಿಕಾಗೆ ಮಿಲ್ಲರ್ ಗೆಲುವು ತಂದುಕೊಟ್ಟರು.
ಭಾರತ ಪರ ಆರ್ಷದೀಪ್ 25ಕ್ಕೆ 2, ಮೊಹ್ಮದ್ ಶಮಿ 13ಕ್ಕೆ1, ಹಾರ್ದಿಕ್ ಪಾಂಡ್ಯ 29ಕ್ಕೆ 1, ಆರ್.ಅಶ್ವಿನ್ 43ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನಾ ಬ್ಯಾಟಿಂಗ್ ಮಾಡಿದ ಭಾರತ, ಎನ್ಗಿಡಿ ದಾಳಿಗೆ ಅಲುಗಿತು. ಕೆ.ಎಲ್.ರಾಹುಲ್ (9ರನ್), ನಾಯಕ ರೋಹಿತ್ ಶರ್ಮಾ (15ರನ್), ವಿರಾಟ್ ಕೊಹ್ಲಿ 12 ರನ್ ಗಳಿಸಿ ಲುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು.
ನಾಲಕ್ನೆ ಕ್ರಮಾಂಕದಲ್ಲಿ ಬಂದ ಸೂರ್ಯ ಕುಮಾರ್ ಯಾದವ್ 68 ರನ್ (40 ಎಸೆತ, 6ಬೌಂಡರಿ, 3 ಸಿಕ್ಸರ್) ಹೊಡೆದರು. ನಂತರ ಬಂದ ದೀಪಕ್ ಹೂಡಾ 0,ಹಾರ್ದಿಕ್ ಪಾಂಡ್ಯ 2 ರನ್ ಗಳಿಸಿ ಪೆವಿಲಿಯನ್ ಸೇರಿದರು. ಏಕಾಂಗಿ ಹೋರಾಟ ಮಾಡಿದ ಸೂರ್ಯ ಕುಮಾರ್ 30 ಎಸೆತದಲ್ಲಿ ಅರ್ಧ ಶತಕ ಸಿಡಿಸಿದರು. 68 ರನ್ ಗಳಿಸಿದ್ದಾಗ ಪಾರ್ನೆಲ್ಗೆ ವಿಕೆಟ್ ಒಪ್ಪಿಸಿದರು.