`ಯತ್ನಾಳ್ ಗೆ ಧೈರ್ಯವಿದ್ರೆ ಪರಿಹಾರ ನೀಡದ ಮೋದಿಯನ್ನು ಪ್ರಶ್ನಿಸಲಿ’
ಬೆಂಗಳೂರು : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಧೈರ್ಯವಿದ್ದರೇ ಪರಿಹಾರ ನೀಡದ ಪ್ರಧಾನಿ ಮೋದಿಯನ್ನು ಪ್ರಶ್ನಿಸಲಿ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸವಾಲ್ ಹಾಕಿದ್ದಾರೆ.
ಕನ್ನಡ ಪರ ಹೋರಾಟಗಾರನ್ನು ರೋಲ್ ಕಾಲ್ ಹೋರಾಟಗಾರರು ಎಂದು ಆರೋಪಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಜ್ಯದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿವೆ.
ಅದರಂತೆ ಬೆಂಗಳೂರಿನಲ್ಲಿ ಯತ್ನಾಳ್ ವಿರುದ್ಧ ಕರವೇ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ವೇಳೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕನ್ನಡ ಪರ ಹೋರಾಟಗಾರರ ಬಗ್ಗೆ ಕುಚೇಷ್ಠೆ ಮಾತುಗಳನ್ನಾಡಿದ್ದಾರೆ.
ಅವರು ಚಳವಳಿಗಾರರ ವಿರುದ್ಧ ಯಾವ ಮಾತುಗಳನ್ನಾಡಿದ್ದಾರೋ ಅವು ಅವರಿಗೇ ಅನ್ವಯಿಸುತ್ತವೆ.
ಸಚಿವ ಸ್ಥಾನ ಪಡೆಯಲು ಆಗಾಗ ತಮ್ಮ ಪಕ್ಷದ ಸರ್ಕಾರವನ್ನೇ ಬ್ಲಾಕ್ ಮೇಲ್ ಮಾಡಿಕೊಂಡು ಬಂದವರು ಅವರೇ ಎಂದು ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಅವರನ್ನು ಹುಚ್ಚಾಸ್ಪತ್ರೆಗೆ ಸೇರಿಸಿ : ಸಾ.ರಾ.ಗೋವಿಂದು
ಇನ್ನ ಯತ್ನಾಳ್ ಶಾಸಕರಾಗಿರುವ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ನೆರೆಯಿಂದ 25 ಸಾವಿರ ಕೋಟಿಯಷ್ಟು ನಷ್ಟವಾಗಿದೆ.
10 ಸಾವಿರ ಕೋಟಿ ರೂ. ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದಾರೆ.
ಜನಪ್ರತಿನಿಯಾದ ಯತ್ನಾಳ್ ಅವರಿಗೆ ಜನಪರ ಕಾಳಜಿ ಇದ್ದರೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಬೇಕು.
ಜಿಎಸ್ ಟಿ ವ್ಯವಸ್ಥೆ ಜಾರಿಯಾದಾಗಿನಿಂದಲೂ ಲಕ್ಷಾಂತರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಸಂಗ್ರಹಿಸಿ ಕೇಂದ್ರಕ್ಕೆ ನೀಡುತ್ತಿದೆ.
ಆದರೆ, ರಾಜ್ಯಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಹಣ ನೀಡಿಲ್ಲ.
ಯತ್ನಾಳ್ ಅವರಿಗೆ ಧೈರ್ಯವಿದ್ದರೆ ಮೋದಿ ಸರ್ಕಾರವನ್ನು ಕೇಳಿ ರಾಜ್ಯಕ್ಕೆ ಅನುಕೂಲ ಮಾಡಿಕೊಡಲಿ ಎಂದು ಟಿ.ಎ.ನಾರಾಯಣಗೌಡ ಅವರು ಯತ್ನಾಳ್ ಅವರಿಗೆ ಸವಾಲ್ ಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










