Ravi Shastri | ಯಾರ್ಕರ್ ಕಿಂಗ್ ಟಿ ನಟರಾಜನ್..!!
ಟೀಂ ಇಂಡಿಯಾ ವೇಗಿ ಟಿ. ನಟರಾಜನ್ ಬಗ್ಗೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಐಪಿಎಲ್-2022ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿರುವ ನಟರಾಜನ್ ಅದ್ಭುತ ಪ್ರದರ್ಶನ ನೀಡುತ್ತಿರುವುದು ಗೊತ್ತಿರುವ ಸಂಗತಿ.
ಕಳೆದ ವರ್ಷ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಟರಾಜನ್ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ಇದರೊಂದಿಗೆ ನಟರಾಜನ್ ಟಿ20 ವಿಶ್ವಕಪ್‌ನಿಂದ ವಂಚಿತರಾದರು. ಆದರೆ, ಇದೀಗ ಸಂಪೂರ್ಣ ಫಿಟ್ ನೆಸ್ ನಲ್ಲಿದ್ದು, ಐಪಿಎಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಮಧ್ಯೆ ನಟರಾಜನ್ ಬಗ್ಗೆ ಮಾತನಾಡಿರುವ ರವಿಶಾಸ್ತ್ರಿ, ಟಿ20 ವಿಶ್ವಕಪ್-2021ರಲ್ಲಿ ಭಾರತ ಖಂಡಿತವಾಗಿಯೂ ನಟರಾಜನ್ ಸೇವೆಯನ್ನು ಕಳೆದುಕೊಂಡಿತ್ತು. ಅವರು ಫಿಟ್ ಆಗಿದ್ದರೆ ತಂಡದಲ್ಲಿ ಖಂಡಿತ ಇರುತ್ತಿದ್ದರು. ನಟರಾಜನ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಗಾಯಗೊಂಡಿದ್ದರು. ಅವರು ಸ್ಪೆಷಲಿಸ್ಟ್ ಡೆತ್ ಬೌಲರ್ ಮತ್ತು ಯಾರ್ಕರ್ ಗಳನ್ನು ಅದ್ಭುತವಾಗಿ ಹಾಕಬಲ್ಲ. ನಟರಾಜನ್ ತನ್ನ ವೇಗದಿಂದ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಭಯ ಹುಟ್ಟಿಸಬಲ್ಲ . ನಾನು ಅವರನ್ನು ಆಯ್ಕೆ ಮಾಡಿದ ಪ್ರತಿ ಪಂದ್ಯದಲ್ಲೂ ಭಾರತ ಗೆದ್ದಿದೆ. ನೆಟ್ ಬೌಲರ್‌ನಿಂದ ನಟರಾಜನ್ ಈ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ಸಂಗತಿ,’’ ಎಂದು ರವಿಶಾಸ್ತ್ರಿ ಹೇಳಿದ್ದಾರೆ. T Natarajan as a death bowling specialist