ವಿರಾಟ್ ಕೊಹ್ಲಿ ಟಿ- 20 ಕ್ರಿಕೆಟ್ ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್ ಮೆನ್ ಹಾಗೂ ವಿಶ್ವದ ಐದನೇ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಹೌದು, ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ಟಿ-20 ಕ್ರಿಕೆಟ್ ನಲ್ಲಿ 10 ಸಾವಿರ ರನ್ ದಾಖಲಿಸಿದ್ದಾರೆ. ಭಾರತೀಯ ಕ್ರಿಕೆಟ್ ನ ಮಟ್ಟಿಗೆ ಈ ಸಾಧನೆ ಮಾಡಿದ ಮೊದಲ ಆಟಗಾರನಾಗಿ ಕಿಂಗ್ ಕೊಹ್ಲಿ ಹೊರಹೊಮ್ಮಿದ್ದಾರೆ.
14ನೇ ಐಪಿಎಲ್ ಆವೃತ್ತಿಯ 39ನೇ ಪಂದ್ಯ ಅಂದ್ರೆ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ 13 ರನ್ ದಾಖಲಿಸಿದ್ದಾಗ ಈ ಸಾಧನೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ಆಕರ್ಷಕ 51 ರನ್ ಸಿಡಿಸಿದ್ದರು. ಕಿಂಗ್ ಕೊಹ್ಲಿ ಒಟ್ಟು 314 ಟಿ -20 ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ 41.65ರ ಸರಾಸರಿಯಲ್ಲಿ ವಿರಾಟ್ 10,038 ರನ್ ದಾಖಲಿಸಿದ್ದಾರೆ. 7499 ಎಸೆತಗಳನ್ನು ಎದುರಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ 74 ಅರ್ಧಶತಕಗಳಿವೆ. ಹಾಗೇ 889 ಬೌಂಡರಿ ಮತ್ತು 319 ಸಿಕ್ಸರ್ ಗಳೂ ಇವೆ. 138 ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಇನ್ನು ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ್ದ ಐದನೇ ಆಟಗಾರನಾಗಿಯೂ ವಿರಾಟ್ ಕೊಹ್ಲಿ ಹೊರಹೊಮ್ಮಿದ್ದಾರೆ.
ಹಾಗೇ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ 14,275 ರನ್ ದಾಖಲಿಸಿ ಅಗ್ರ ಸ್ಥಾನದಲ್ಲಿದ್ರೆ, ಕಿರಾನ್ ಪೊಲಾರ್ಡ್ 11.195 ರನ್ ಗಳೊಂದಿಗೆ ಎರಡನೇ ಸ್ಥಾನಲ್ಲಿದ್ದಾರೆ. ಶೋಯಿಬ್ ಮಲ್ಲಿಕ್ 10,808 ರನ್ ಗಳೊಂದಿಗೆ ಮೂರನೇ ಸ್ಥಾನ ಮತ್ತು ಡೇವಿಡ್ ವಾರ್ನರ್ 10,019 ರನ್ ದಾಖಲಿಸಿ ನಾಲ್ಕನೇ ಸ್ಥಾನದಲ್ಲಿದ್ರು. ಇದೀಗ ವಿರಾಟ್ ಕೊಹ್ಲಿ ಒಟ್ಟು ರನ್ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಡೇವಿಡ್ ವಾರ್ನರ್ ಐದನೇ ಸ್ಥಾನಕ್ಕಿಳಿದಿದ್ದಾರೆ.
ಟಿ- ಟ್ವೆಂಟಿ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ..!
314 ಪಂದ್ಯ
10,038 – ರನ್
7499 – ಎದುರಿಸಿದ ಎಸೆತಗಳು
5- ಶತಕಗಳು
74- ಅರ್ಧಶತಕಗಳು
889 – ಬೌಂಡರಿಗಳು
319- ಸಿಕ್ಸರ್ ಗಳು
138 – ಕ್ಯಾಚ್ ಗಳು








