T20 Ranking: ಬಾಬರ್ & ಹಸರಂಗ ಟಾಪ್
ಸದ್ಯ ನಡೆಯುತ್ತಿರುವ T20 ವಿಶ್ವಕಪ್ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಈಗ ICC ಪುರುಷರ T20 ಶ್ರೇಯಾಂಕದಲ್ಲಿ ನಂಬರ್ ಒನ್ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದಾರೆ.ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕಗಳನ್ನು ಸಿಡಿಸಿರುವ ಬಾಬರ್, ಇಂಗ್ಲೆಂಡ್ನ ಡೇವಿಡ್ ಮಲಾನ್ ಅವರನ್ನು ಕೆಳಗಿಳಿಸಿ ಅಗ್ರ ಸ್ಥಾನಕ್ಕೆ ಲಗ್ಗೆ ಹಾಕಿದ್ದಾರೆ.
ಬೌಲರ್ಗಳ ಪೈಕಿ, ಶ್ರೀಲಂಕಾದ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರು ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಎರಡು ಭಾರಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ 776 ಪಾಯಿಂಟ್ ಗಳಿಸಿ ವೃತ್ತಿಜೀವನದ ಅತ್ಯುತ್ತಮ ಅಗ್ರ ಶ್ರೇಯಾಂಕವನ್ನು ಗಳಿಸಿದ್ದಾರೆ.
ಅಲ್ ರೌಂಡರ್ ವಿಭಾಗದಲ್ಲಿ ಶಕೀಬ್ ಹಲ್ ಹಸನ್ ಮತ್ತು ಮೊಹಮ್ಮದ್ ನಭಿ ಇಬ್ಬರೂ 271 ಪಾಯಿಂಟ್ ಗಳಿಸುವ ಮೂಲಕ ಮೊದಲೆರಡು ಸ್ಥಾನಗಳನ್ನ ಕ್ರಮವಾಗಿ ಹಂಚಿಕೊಂಡಿದ್ದಾರೆ.








