ಐಸಿಸಿ ನೂತನ ಟಿ20 ಶ್ರೇಯಾಂಕ ಪಟ್ಟಿ (ICC T20I Rankings) ಬಿಡುಗಡೆ ಮಾಡಿದ್ದು, ಯಶಸ್ವಿ ಜೈಸ್ವಾಲ್ ಮೇಲಕ್ಕೆ ಏರಿಕೆ ಕಂಡಿದ್ದಾರೆ.
ಅಲ್ಲದೇ, ಈ ಬಾರಿ ಟಿ20 ಬ್ಯಾಟರ್ ಗಳ ಪಟ್ಟಿಯಲ್ಲಿ ಭಾರತ ತಂಡದ ಮೂವರು ಆಟಗಾರರು ಟಾಪ್-10ರಲ್ಲಿ ಸ್ಥಾನ ಪಡೆದಿದ್ದಾರೆ. ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಯಶಸ್ವಿಯಾಗಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಕಾಣಿಸಿಕೊಂಡಿದ್ದಾರೆ.
ಯಶಸ್ವಿ ಜೈಸ್ವಾಲ್ 4 ಸ್ಥಾನ ಮೇಲಕ್ಕ ಏರಿ 6ನೇ ಸ್ಥಾನದಲ್ಲಿದ್ದಾರೆ. ರುತುರಾಜ್ ಗಾಯಕ್ವಾಡ್ ಕೂಡ 10ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬೌಲಿಂಗ್ ವಿಭಾಗದಲ್ಲಿ ಮಾತ್ರ ಯಾವೊಬ್ಬ ಭಾರತೀಯ ಬೌಲರ್ ಕೂಡ ಸ್ಥಾನ ಪಡೆದಿಲ್ಲ.
ಟಿ20 ಬ್ಯಾಟರ್ ಗಳ ಟಾಪ್ 10ರ ಪಟ್ಟಿ
1. ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 844 ರೇಟಿಂಗ್
2. ಸೂರ್ಯಕುಮಾರ್ ಯಾದವ್ (ಭಾರತ)- 797 ರೇಟಿಂಗ್
3. ಫಿಲ್ ಸಾಲ್ಟ್ (ಇಂಗ್ಲೆಂಡ್)- 797 ರೇಟಿಂಗ್
4. ಬಾಬರ್ ಆಝಂ (ಪಾಕಿಸ್ತಾನ್)- 755 ರೇಟಿಂಗ್
5. ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್) 746 ರೇಟಿಂಗ್
6. ಯಶಸ್ವಿ ಜೈಸ್ವಾಲ್ (ಭಾರತ)- 743 ರೇಟಿಂಗ್
7. ಜೋಸ್ ಬಟ್ಲರ್ (ಇಂಗ್ಲೆಂಡ್)- 716 ರೇಟಿಂಗ್
8. ರುತುರಾಜ್ ಗಾಯಕ್ವಾಡ್ (ಭಾರತ)- 684 ರೇಟಿಂಗ್
9. ಬ್ರಾಂಡನ್ ಕಿಂಗ್ (ವೆಸ್ಟ್ ಇಂಡೀಸ್)- 656 ರೇಟಿಂಗ್
10. ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್)- 655 ರೇಟಿಂಗ್
ಬೌಲರ್ ಗಳ ಟಾಪ್ 10 ಪಟ್ಟಿ
1. ಆದಿಲ್ ರಶೀದ್ (ಇಂಗ್ಲೆಂಡ್)- 718 ರೇಟಿಂಗ್
2. ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ)- 675 ರೇಟಿಂಗ್
3. ವನಿಂದು ಹಸರಂಗ (ಶ್ರೀಲಂಕಾ)- 674 ರೇಟಿಂಗ್
4. ರಶೀದ್ ಖಾನ್ (ಅಫ್ಘಾನಿಸ್ತಾನ್)- 668 ರೇಟಿಂಗ್
5. ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 662 ರೇಟಿಂಗ್
6. ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್)- 659 ರೇಟಿಂಗ್
7. ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 654 ರೇಟಿಂಗ್
8. ಫಝಲ್ಹಕ್ ಫಾರೂಖಿ (ಅಫ್ಘಾನಿಸ್ತಾನ್)- 645 ರೇಟಿಂಗ್
9. ಮಹೀಶ್ ತೀಕ್ಷಣ (ಶ್ರೀಲಂಕಾ)- 644 ರೇಟಿಂಗ್
10. ಅಲ್ಝಾರಿ ಜೋಸೆಫ್ (ವೆಸ್ಟ್ ಇಂಡೀಸ್)- 633 ರೇಟಿಂಗ್








