T20 wc 2022 – ಸೋಲಿನಿಂದ ಕಲಿತ ಪಾಠ… ಇವರಿಗೆ ಹೇಳಬೇಕಿದೆ ಟಾಟಾ
ಟಿ 20 ವರ್ಲ್ಡ್ ಕಪ್ 2022 ರ ಭಾಗವಾಗಿ ಸೌಥ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ.
ಈ ಸೋಲಿನಿಂದ ಟೀಂ ಇಂಡಿಯಾ ಸಾಕಷ್ಟು ಪಾಠಗಳನ್ನು ಕಲಿತುಕೊಳ್ಳುವ ಅವಶ್ಯಕತೆ ಇದೆ ಎಂದು ಕ್ರಿಕೆಟ್ ವಿಶ್ಲೇಶಕರು, ಮಾಜಿ ಕ್ರಿಕೆಟರ್ ಗಳು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ದದ ಸೋಲನ್ನು ರೋಹಿತ್ ಶರ್ಮಾ ಸೇನೆ ಕೇವಲವಾಗಿ ತೆಗೆದುಕೊಂಡರೇ ಮುಂದಿನ ಪಂದ್ಯದಲ್ಲಿ ಆಘಾತ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾದ ಮ್ಯಾನೇಜ್ ಮೆಂಟ್ ಈಗಲಾದರೂ ಎಚ್ಚರಗೊಂಡು ಬದಲಾವಣೆಗಳಿವೆ ಬ್ರೇಕ್ ಹಾಕಬೇಕು ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ.
ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ಕೆಲವು ಆಟಗಾರರಿಗೆ ಮತ್ತೆಮತ್ತೆ ಅವಕಾಶಗಳನ್ನು ನೀಡಿ ತಂಡದ ಲಯಕ್ಕೆ ಪೆಟ್ಟು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಬ್ಯಾಕ್ ಟು ಬ್ಯಾಕ್ ಮ್ಯಾಚ್ ಗಳಲ್ಲಿ ವೈಫಲ್ಯ ಅನುಭವಿಸುತ್ತಿರುವ ಆರಂಭಿಕ ಕೆ.ಎಲ್.ರಾಹುಲ್ ಅವರಿಗೆ ಮೊದಲ ಕೋಕ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಪಾಕ್ ವಿರುದ್ಧ ನಾಲ್ಕು ರನ್, ನೆದರ್ ಲೆಂಡ್ ವಿರುದ್ಧ 9 ರನ್, ಸೌಥ್ ಆಫ್ರಿಕಾ ವಿರುದ್ಧ 9 ರನ್ ಗಳಿಸಿದ ರಾಹುಲ್ ಅವರ ಸ್ಥಾನದಲ್ಲಿ ರಿಷಬ್ ಪಂತ್ ಅವರನ್ನು ಕಣಕ್ಕಿಳಿಸಬೇಕು ಎಂದು ಸಲಹೆ ನೀಡುತ್ತಿದ್ದಾರೆ.
ಹಾಗೇ ಫಿನಿಷರ್ ಕೋಟಾದಲ್ಲಿ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ದಿನೇಶ್ ಕಾರ್ತಿಕ್ ಗೂ ಕೋಕ್ ನೀಡಬೇಕಾದ ಸಮಯ ಬಂದಾಗಿದೆ ಎನ್ನುತ್ತಿದ್ದಾರೆ.
ದಿನೇಶ್ ಕಾರ್ತಿಕ್ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಫಿನಿಷರ್ ಅಲ್ಲ ಅಸಲಿಗೆ ಬ್ಯಾಟಿಂಗ್ ಗೊತ್ತಿಲ್ಲ ಅನ್ನೋ ರೀತಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.
ಮೆಗಾ ಟೂರ್ನಿಯಲ್ಲಿ ಹೀಗೆ ವೈಫಲ್ಯ ಅನುಭವಿಸುತ್ತಿರುವ ಆಟಗಾರರನ್ನು ತಂಡದಲ್ಲಿ ಆಡಿಸಿ ಯಾವುದೇ ಪ್ರಯೋಜನವಿಲ್ಲ. ದಿನೇಶ್ ಕಾರ್ತಿಕ್ ಬದಲಿಗೆ ತಂಡದಲ್ಲಿ ಮತ್ತೊಬ್ಬ ಬ್ಯಾಟರ್ ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ಎರಡು ಬದಲಾವಣೆಗಳು ಮಾತ್ರವಲ್ಲದೇ ಮತ್ತೊಂದು ಬದಲಾವಣೆ ಮಾಡಬೇಕೆಂದು ಕೆಲವರು ವಾದಿಸುತ್ತಿದ್ದಾರೆ.
ಪ್ರಸ್ತುತ ವಿಶ್ವಕಪ್ ನಲ್ಲಿ ಸತತ ಮೂರು ಮ್ಯಾಚ್ ಗಳಲ್ಲಿ ಆಡುವ ಅವಕಾಶ ಪಡೆದ ರವಿಚಂದ್ರನ್ ಆಶ್ವಿನ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ.
ಹೀಗಾಗಿ ಅವರ ಬದಲಿಗೆ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್, ಅಥವಾ ಮೀಡಿಯಂ ಪೇಸರ್ ಹರ್ಷಲ್ ಪಟೇಲ್ ಅವರಿಗೆ ಚಾನ್ಸ್ ನೀಡಬೇಕು ಎಂದಿದ್ದಾರೆ.
ಸೂಪರ್ 12 ಹಂತದಲ್ಲಿ ಟೀಂ ಇಂಡಿಯಾಗೆ ಮುಂದಿನ ಪಂದ್ಯಗಳು ತುಂಬಾ ಮಹತ್ವದ್ದಾಗಿವೆ.
ಮುಂದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಮೈಮರೆತರೇ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಗಳು ಕೂಡ ಹೆಚ್ಚಿವೆ.