T20 Wold Cup : ಹಿಸ್ಟರಿಯಲ್ಲಿ ವಿಶ್ವದ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್ಗಳು..!!
ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಬ್ಯಾಟರ್ಗಳು ಅಬ್ಬರಿಸಿದ್ದಾರೆ.
ಹಾರ್ಡ್ ಅಂಡ್ ಬೌನ್ಸಿ ಪಿಚ್ನಲ್ಲು ರನ್ ಮಳೆ ಸುರಿಸಿದ್ದಾರೆ. ವೇಗಿಗಳಿಗೆ ನೆರವು ನೀಡುವ ಆಸ್ಟ್ರೇಲಿಯಾ ಪಿಚ್ಗಳಲ್ಲಿ ಬ್ಯಾಟರ್ಗಳು ಸ್ಫೋಟಕ ಬ್ಯಾಟಿಂಗ್ ಮಾಡಿ ರನ್ ಶಿಖರ ಕಟ್ಟಿದ್ದಾರೆ.
ಅದರಲ್ಲೂ ಬ್ಯಾಟರ್ಗಳು ಸಿಕ್ಸರ್ ಗಳ ಮಳೆ ಸುರಿಸಿದ್ದಾರೆ.
ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಹೊಡೆದವರು ಜಿಂಬಾಬ್ವೆ ತಂಡದ ಆಲ್ರೌಂಡರ್ ಸಿಕಂದರ್ ರಾಝಾ ಒಟ್ಟು 11 ಸಿಕ್ಸರ್ ಸಿಡಿಸಿದ್ದಾರೆ. ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಅ್ಯಲೆಕ್ಸ್ ಹೇಲ್ಸ್ 10 ಸಿಕ್ಸರ್, ಶ್ರೀಲಂಕಾ ತಂಡದ ಓಪನರ್ 10 ಸಿಕ್ಸರ್ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟರ್ ರೀಲಿ ರುಸೌ 9 ಸಿಕ್ಸರ್, ಆಸ್ಟ್ರೇಲಿಯಾ ತಂಡದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ 9 ಸಿಕ್ಸರ್, ಸೂರ್ಯ ಕುಮಾರ್ 9 ಸಿಕ್ಸರ್, ಐರ್ಲೆಂಡ್ ತಂಡದ ಆಂಡ್ರೀವ್ ಬಾಲ್ಬೀರಿನ್ ಕೂಡ 9 ಸಿಕ್ಸರ್ ಸಿಡಿಸಿದ ಅಗ್ರ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದಾರೆ.