ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಹೆಚ್ಚಾದ ಕಾಶ್ಮೀರ ಬಿಸಿ, ಹೈವೋಲ್ಟೇಜ್ ಕಾದಾಟಕ್ಕೆ ಮುನ್ನ ಪಾಕ್ಗೆ ಕಸಿವಿಸಿ
ಟಿ-20 ವಿಶ್ವಕಪ್ ಫೈನಲ್ ನಲ್ಲಿ ಯಾರು ಎದುರಾಗುತ್ತಾರೋ ಗೊತ್ತಿಲ್ಲ. ಫೈನಲ್ ಮ್ಯಾಚ್ ಎಷ್ಟು ಇಂಟರೆಸ್ಟಿಂಗ್ ಆಗಿರುತ್ತೋ ಗೊತ್ತಿಲ್ಲ. ಆದರೆ ಅಕ್ಟೋಬರ್ 24ರಂದು ನಡೆಯುವ ಇಂಡಿಯಾ-ಪಾಕಿಸ್ತಾನ ಮ್ಯಾಚ್ ಮಾತ್ರ ಫೈನಲ್ ಗಿಂತಲೂ ಹೆಚ್ಚು ಕುತೂಹಲ ಕೆರಳಿಸಿದೆ. ಕಡುಬದ್ಧ ವೈರಿಗಳು 2019ರ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಅಖಾಡಕ್ಕೆ ಇಳಿಯಲಿವೆ. ಭಾರತ ಇಲ್ಲಿ ತನಕ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಸೋತೇ ಇಲ್ಲ.. ಪಾಕ್ ಯಾವುದೇ ರೀತಿಯ ವಿಶ್ವಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿಯೇ ಇಲ್ಲ. ಹೀಗಾಗಿ ಭಾರತದ ಅಭಿಮಾನಿಗಳು ಪಟಾಕಿ ಬಾಕ್ಸ್ ರೆಡಿ ಮಾಡಿ ಇಟ್ಟುಕೊಂಡು ಮ್ಯಾಚ್ ಮುಗಿಯೋದನ್ನ ಕಾಯ್ತಿದ್ದಾರೆ.
ಪಾಕ್ ವಿರುದ್ಧದ ಪಂದ್ಯ ಐಸಿಸಿ ಶೆಡ್ಯೂಲ್ನ ಭಾಗ. ಆದರೆ ಕಾಶ್ಮೀರದಲ್ಲಿ ಪಾಕ್ ನಡೆಸುತ್ತಿರುವ ಭಯೋತ್ಪಾದಕತೆ ಈಗ ಕ್ರಿಕೆಟ್ ಫೀಲ್ಡ್ ಗೆ ಡಿಸ್ಟರ್ಬ್ ಮಾಡ್ತಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮ್ಯಾಚ್ ಕ್ಯಾನ್ಸಲ್ ಮಾಡಲು ಹಲವು ಸಂಘಟನೆಗಳು, ರಾಜಕೀಯ ವ್ಯಕ್ತಿಗಳು ಒತ್ತಾಯ ಮಾಡ್ತಿದ್ದಾರೆ. ಇದು ಪಂದ್ಯಕ್ಕೂ ಮುನ್ನ ಪಾಕ್ ಗೆ ಕಸಿವಿಸಿ ಉಂಟು ಮಾಡುತ್ತಿದೆ.
ಅಭಿಮಾನಿಗಳು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಕಾತರರಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನವು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಹದಗೆಟ್ಟ ಪರಿಸ್ಥಿತಿಗಳ ನಂತರ ಈ ಪಂದ್ಯವನ್ನು ರದ್ದುಗೊಳಿಸಬೇಕೆಂದ ಭಾರತದಲ್ಲಿ ಒತ್ತಾಯ ಹೆಚ್ಚಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕೊನೆಯ ಪಂದ್ಯ 2019 ರಲ್ಲಿ ನಡೆಸಲಾಯಿತು
ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬಕ್ಕೆ ರಿವೀಲ್ ಆದ ʼಟಾಕ್ಸಿಕ್ʼ (Toxic Movie) ಬರ್ತ್ ಡೇ ಪೀಕ್ ಹೊಸ ದಾಖಲೆಯನ್ನು ಬರೆದಿದೆ. ಬರ್ತ್ ಡೇ ಪೀಕ್ ಗ್ಲಿಂಪ್ಸ್ನಲ್ಲಿ...