T20 World Cup 2022: ನಮೀಬಿಯಾ ಬೌಲಿಂಗ್ ದಾಳಿಗೆ ಶ್ರೀಲಂಕಾ ತತ್ತರ!!
ಟಿ 20 ವಿಶ್ವಕಪ್ನ ಮೊದಲ ಪಂದ್ಯದಲ್ಲಿಯೇ ಅಚ್ಚರಿಯ ಪ್ರದರ್ಶನಗಳು ಹೊರ ಬಂದಿವೆ. ಭಾನುವಾರ ನಡೆದ ಅರ್ಹತಾ ಪಂದ್ಯದಲ್ಲಿ ನಮೀಬಿಯಾ 55 ರನ್ಗಳಿಂದ ಶ್ರೀಲಂಕಾದಂತಹ ದಿಗ್ಗಜ ತಂಡವನ್ನು ಮಣಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾ 164 ರನ್ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ತಂಡ 108 ರನ್ಗಳಿಗೆ ಆಲೌಟ್ ಆಯಿತು. ನಮೀಬಿಯಾದ ಆಲ್ ರೌಂಡರ್ ಗಳು ಪಂದ್ಯದ ಗತಿಯನ್ನೇ ಬದಲಿಸಿಬಿಟ್ಟಿದ್ದಾರೆ. ಜೇನ್ ಫ್ರೈಲಿಂಕ್ ಮತ್ತು ಜೆಜೆ ಸ್ಮಿತ್ 69 ರನ್ಗಳ ಜೊತೆಯಾಟದ ಜೊತೆ್ಗೆ ಇಬ್ಬರೂ ನಿರ್ಣಾಯಕ ಸಂದರ್ಭಗಳಲ್ಲಿ ಶ್ರೀಲಂಕಾದ ಪ್ರಮುಖ 3 ವಿಕೆಟ್ ಮಿಂಚಿದ್ದಾರೆ.
ನಮೀಬಿಯಾ ನಾಯಕ ಜೇನ್ ಫ್ರೈಲಿಂಕ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದರು. 28 ವರ್ಷದ ಫ್ರೈಲಿಂಕ್ ಮೊದಲು 44 ರನ್ ಗಳಿಸಿ ನಂತರ ಎರಡು ವಿಕೆಟ್ ಕಿತ್ತರು. ಇವರಲ್ಲದೆ ಡೇವಿಡ್ ವೈಸ್, ಬರ್ನಾರ್ಡ್ ಸ್ಕೋಲ್ಟ್ಜ್ ಮತ್ತು ಬೆನ್ ಶಿಕೊಂಗೊ ತಲಾ ಎರಡು ವಿಕೆಟ್ ಪಡೆದರು. ಫ್ರೈಲಿಂಕ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಂದ್ಯಕ್ಕೆ ತಿರುವು..
ಮೊದಲು ಬ್ಯಾಟ್ ಮಾಡಿದ ನಮೀಬಿಯಾ 93 ರನ್ಗಳಿಗೆ 6 ವಿಕೆಟ್ ಪತನಗೊಂಡಿತ್ತು. 15ನೇ ಓವರ್ ನಡೆಯುತ್ತಿದ್ದ ಸಮಯದಲ್ಲಿ ಫ್ರೈಲಿಂಕ್ ಮತ್ತು ಜೆಜೆ ಸ್ಮಿತ್ ಪಂದ್ಯ ಗೇರ್ ಶಿಫ್ಟ್ ಮಾಡಿದರು. ಕೇವಲ 33 ಎಸೆತಗಳಲ್ಲಿ 69 ರನ್ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನ 163ಕ್ಕೆ ತಂದು ನಿಲ್ಲಿಸಿದ್ದರು.
164 ರನ್ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 4 ವಿಕೆಟ್ ಕಳೆದುಕೊಂಡಿತ್ತು. ರಾಜಪಕ್ಸೆ ಮತ್ತು ಶನಕ ಇನಿಂಗ್ಸ್ ನಿಭಾಯಿಸುತ್ತಿದ್ದರು. ಇಬ್ಬರೂ 24 ಎಸೆತಗಳಲ್ಲಿ 34 ರನ್ ಗಳಿಸಿ ಸ್ಕೋರ್ 70 ದಾಟಿದರು. ಪಂದ್ಯದ ಮೇಲೆ ಶ್ರೀಲಂಕಾದ ಹಿಡಿತವೂ ಹಾಗೇ ಇತ್ತು, ಆದರೆ 11 ನೇ ಓವರ್ನಲ್ಲಿ ಭಾನುಕಾ ರಾಜಪಕ್ಸೆ ಔಟಾದರು. ಇಲ್ಲಿಯೇ ಶ್ರೀಲಂಕಾ ಸೋಲು ನಿರ್ಧಾರವಾಯಿತು.
ಈ ಗೆಲುವಿನೊಂದಿಗೆ ನಮೀಬಿಯಾ ಸೂಪರ್-12 ಪ್ರವೇಶಿಸುವಲ್ಲಿ ದಾಪುಗಾಲಿಟ್ಟಿದೆ. ಆದರೆ, ನಮೀಬಿಯಾ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ಮತ್ತೊಂದೆಡೆ, ಈ ಹೀನಾಯ ಸೋಲು 2014 ರ ಚಾಂಪಿಯನ್ ಶ್ರೀಲಂಕಾದ ಭರವಸೆಗೆ ದೊಡ್ಡ ಪೆಟ್ಟು ನೀಡಿದೆ. ಅವರು ಸೂಪರ್-12 ತಲುಪಬೇಕಾದರೆ, ಅವರು ಉಳಿದ ಅರ್ಹತಾ ಪಂದ್ಯಗಳನ್ನ ಗೆಲ್ಲಲೇ ಬೇಕು..
T20 World Cup 2022: Sri Lanka reeling from Namibia’s bowling attack!!