T20 World Cup 2022: ಭಾರತ ಪಾಕಿಸ್ತಾನ ಮ್ಯಾಚ್ ಟಿಕೆಟ್ ಗಳು ಕೆಲವೇ ಕ್ಷಣಗಳಲ್ಲಿ ಸೋಲ್ಡ್ ಔಟ್..
ಏಷ್ಯಾ ಕಪ್ ನಂತರ ಭಾರತ ಪಾಕಿಸ್ತಾನ ತಂಡಗಳು ಟಿ20 ವರ್ಲ್ಡ್ ಕಪ್ ನಲ್ಲಿ ಎದುರುಬದುರಾಗುತ್ತಿವೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ICC T20 ವಿಶ್ವಕಪ್ 2022 ನಲ್ಲಿ ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿವೆ. ಇದು ಭಾರತ ಪಾಕಿಸ್ತಾನದ ಮ್ಯಾಚ್ ನ ಕ್ರೇಜ್ ತೋರಿಸುತ್ತಿದೆ.
ಟಿ20 ವಿಶ್ವಕಪ್ ಅಕ್ಟೋಬರ್ 16 ರಿಂದ ಪ್ರಾರಂಭವಾಗುತ್ತಿದ್ದು, ಭಾರತದ ಮೊದಲ ಪಂದ್ಯ ಅಕ್ಟೋಬರ್ 23 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾವನ್ನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಎದುರಿಸಲಿದೆ.
ಐಸಿಸಿ ವೆಬ್‌ಸೈಟ್‌ನಲ್ಲಿ ಟೂರ್ನಿಯಲ್ಲಿ ನಡೆಯಲಿರುವ ಎಲ್ಲಾ ಪಂದ್ಯಗಳ ಟಿಕೆಟ್‌ಗಳ ಮಾರಾಟವನ್ನ ಆರಂಭಿಸಲಾಗಿದೆ. ಸೇಲ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಕ್ಟೋಬರ್ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗಿರುವುದು ಕ್ರಿಕೆಟ್ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇಷ್ಟೇ ಅಲ್ಲದೆ ಹೆಚ್ಚುವರಿಯಾಗಿ ಸ್ಟಾಂಡಿಂಗ್ ಕೊಠಡಿಯ ಟಿಕೆಟ್‌ಗಳು ಕೂಡ ಕೆಲವೇ ಕ್ಷಣಗಳಲ್ಲಿ ಮಾರಾಟವಾಗಿವೆ. ಭಾರತ-ಪಾಕಿಸ್ತಾನ ಪಂದ್ಯದ 5 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ಐಸಿಸಿ ತಿಳಿಸಿದೆ.
ಇನ್ನೂ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮತ್ತು ಎ ಗುಂಪಿನ ರನ್ನರ್ ಅಪ್‌ನೊಂದಿಗಿನ ಭಾರತದ ಪಂದ್ಯದ ಎಲ್ಲಾ ಟಿಕೆಟ್‌ಗಳು ಸಹ ಮಾರಾಟವಾಗಿವೆ.








