T 20 world cup 2022 | ವಿಶ್ವಕಪ್ ನಲ್ಲಿ ಟಾಪ್ ಸ್ಕೋರರ್ ಯಾರಾಗ್ತಾರೆ ?
ಕಾಂಗರೂಗಳ ನಾಡಿನಲ್ಲಿ ಚುಟುಕು ಮಹಾ ಸಂಗ್ರಾಮ ಶುರುವಾಗಿದೆ. ಅಕ್ಟೋಬರ್ 23 ರಂದು ಇಂಡೋ – ಪಾಕ್ ಕಾಳಗ ನಡೆಯಲಿದೆ.
ಈ ಪಂದ್ಯಕ್ಕಾಗಿ ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಟೀಂ ಇಂಡಿಯಾ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ಆಸ್ಟ್ರೇಲಿಯಾಗೆ ಹೋಗಿದೆ.
ಟಿ 20 ವಿಶ್ವಕಪ್ ಭಾಗವಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ತಂಡದ ವಿರುದ್ಧ ಮೊದಲ ವಾರ್ಮ್ ಅಪ್ ಮ್ಯಾಚ್ ನಲ್ಲಿ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಗಳು ಅದ್ಭುತ ಪ್ರದರ್ಶನ ನೀಡಿದ್ರು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಕೆ.ಎಲ್.ರಾಹುಲ್, ಸೂರ್ಯ ಕುಮಾರ್ ಯಾದವ್ ಅರ್ಧಶತಕ ಸಿಡಿಸಿದರು.
ಅಂದಹಾಗೆ ಸದ್ಯ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿರುವ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ.
ಆರಂಭಿಕರಾಗಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಆರಂಭದಲ್ಲಿಯೇ ಪ್ರಳಯ ಸೃಷ್ಟಿಸಬಲ್ಲರು.
ಇದಾದ ಬಳಿಕ ಮಿಡಲ್ ಆರ್ಡರ್ ನಲ್ಲಿ ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್ ರನ್ ಶಿಖರ ಕಟ್ಟಬಲ್ಲರು, ಫಿನಿಷರ್ ಗಳಾಗಿ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಮೈದಾನದಲ್ಲಿ ಬೌಂಡರಿ ಸಿಕ್ಸರ್ ಗಳ ಸುನಾಮಿ ಎಬ್ಬಿಸಬಲ್ಲರು.
ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ ಎಂದು ಎಲ್ಲರೂ ಅಂದಾಜಿಸುತ್ತಿದ್ದಾರೆ. ಈ ನಡುವೆ ಟೀಮ್ ಇಂಡಿಯಾ ಪರ ಯಾವ ಬ್ಯಾಟರ್ ಟಾಪ್ ಸ್ಕೋರರ್ ಆಗ್ತಾರೆ ಎಂಬ ಚರ್ಚೆ ಶುರುವಾಗಿದೆ.
ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದು, ಕೆ.ಎಲ್.ರಾಹುಲ್ ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ಟಾಪ್ ಸ್ಕೋರರ್ ಆಗಿ ನಿಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಆರಂಭಿಕರಾಗಿ ಬರುವ ಕೆ.ಎಲ್.ರಾಹುಲ್ 20 ಓವರ್ ಗಳನ್ನು ಆಡುವ ಅವಕಾಶಗಳಿವೆ. ಜೊತೆಗೆ ಆಸ್ಟ್ರೇಲಿಯಾ ಪಿಚ್ ಗಳಲ್ಲಿ ರಾಹುಲ್ ಗೆ ಒಳ್ಳೆಯ ಟ್ರ್ಯಾಕ್ ರೆಕಾರ್ಡ್ ಇದೆ.
ಅಲ್ಲಿನ ಪಿಚ್ ಗಳು ರಾಹುಲ್ ಬ್ಯಾಟಿಂಗ್ ಸ್ಟ್ರೈಲ್ ಗೆ ಹೇಳಿ ಮಾಡಿಸಿದಂತೆ ಇರುತ್ತವೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಆದ್ರೆ ಸದ್ಯ ಫಾರ್ಮ್ ನೋಡಿದ್ರೆ ಟೀಂ ಇಂಡಿಯಾದ ಬ್ಯಾಟರ್ ಗಳಲ್ಲಿ ಸೂರ್ಯ ಕುಮಾರ್ ಯಾದವ್, ವಿರಾಟ್ ಕೊಹ್ಲಿ ಕೂಡ ಟೀಂ ಇಂಡಿಯಾ ಪರ ಟಾಪ್ ಸ್ಕೋರರ್ ಗಳಾಗುವ ಸಾಧ್ಯತೆಗಳಿವೆ.
ಇದನ್ನೂ ಓದಿ : https://saakshatv.com/t20-world-cup-sa…diction-163930-2/