T20 world cup – ಅಪರೂಪದ ಸಾಧನೆ ಮಾಡಿದ ಟೀಂ ಇಂಡಿಯಾ..
ಆಸ್ಟ್ರೇಲಿಯಾದ ಸಿಡ್ನಿ ವೇದಿಕೆಯಾಗಿ ನಡೆದ ನೆದರ್ ಲ್ಯಾಂಡ್ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾ 59 ರನ್ ಗಳಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 179 ರನ್ ಗಳಿಸಿತ್ತು.
ಇದರಲ್ಲಿ ನಾಯಕ ರೋಹಿತ್ ಶರ್ಮಾ ( 39 ಎಸೆತಗಳಲ್ಲಿ 53 ರನ್ ) , ವಿರಾಟ್ ಕೊಹ್ಲಿ ( 44 ಎಸೆತಗಳಲ್ಲಿ 62 ರನ್ ) , ಸೂರ್ಯ ಕುಮಾರ್ ಯಾದವ್ ( 25 ಎಸೆತಗಳಲ್ಲಿ 51 ರನ್ ) ಅರ್ಧಶತಕ ಸಿಡಿಸಿ ಮಿಂಚಿದರು.
ಇದರೊಂದಿಗೆ ಟಿ 20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಒಂದು ಅಪರೂಪದ ಸಾಧನೆ ಮಾಡಿದೆ.
ಟಿ 20 ವಿಶ್ವಕಪ್ ನ ಒಂದೇ ಪಂದ್ಯದಲ್ಲಿ ಟೀಂ ಇಂಡಿಯಾದ ಮೂವರು ಬ್ಯಾಟರ್ ಗಳು ಅರ್ಧಶತಕ ಸಿಡಿಸಿದ್ದು ಇದು ಎರಡನೇ ಬಾರಿ.. ಒಟ್ಟಾರೆ ಮೂರನೇ ಬಾರಿಗೆ.
ಇದಕ್ಕೂ ಮೊದಲು 2007 ಟಿ 20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಮೇಳೆ ಟೀಂ ಇಂಡಿಯಾ ಈ ಸಾಧನೆ ಮಾಡಿತ್ತು.
ಆ ನಂತರ 2016ರ ಟಿ 20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಮೇಲೆ ಸೌಥ್ ಆಫ್ರಿಕಾದ ಮೂವರು ಬ್ಯಾಟರ್ ಗಳು ಅರ್ಧಶತಕ ಸಿಡಿಸಿದ್ದರು.
ಇದೀಗ ನೆದರ್ ಲ್ಯಾಂಡ್ ವಿರುದ್ದದ ಪಂದ್ಯದಲ್ಲಿ ಟೀಂ ಇಂಡಿಯಾದ ಪರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಈ ಸಾಧನೆ ಮಾಡಿದ್ದಾರೆ.