T20 World cup: 30 ವರ್ಷಗಳ ನಂತರ ಇಂಗ್ಲೆಂಡ್ vs ಪಾಕಿಸ್ತಾನ ಫೈನಲ್ ನಲ್ಲಿ ಮುಖಾಮುಖಿ…
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ T 20 ವಿಶ್ವಕಪ್ ಅಂತಿಮ ಹಂತವನ್ನ ತಲುಪಿದೆ. ಫೈನಲ್ ನಲ್ಲಿ ಕಾದಾಡಲು ಕೊನೆಯ ಹಂತ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ತಮ್ಮ ತಮ್ಮ ಸ್ಟ್ರಾಟರ್ಜಿಗಳೊಂದಿಗೆ ರೆಡಿ ಆಗಿವೆ. ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಭಾನುವಾರ ಅಂತಿಮ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳ ಮುಖಾಮುಖಿ ದಾಖಲೆಗಳು ಈ ರೀತಿ ಇದೆ.
30 ವರ್ಷಗಳ ನಂತರ ಈ ಎರಡೂ ತಂಡಗಳು ವಿಶ್ವಕಪ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ.1992 ರ ODI ವಿಶ್ವಕಪ್‌ನಲ್ಲಿ, ಪಾಕಿಸ್ತಾನ ಇದೇ ಸ್ಥಳದಲ್ಲಿ ಇಂಗ್ಲೆಂಡ್ ಅನ್ನು 22 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು.
ಇದುವರೆಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡೂ ತಂಡಗಳು ಎರಡು ಪಂದ್ಯಗಳಲ್ಲಿ (2009, 2010) ಪೈಪೋಟಿ ನಡೆಸಿದ್ದರೆ, ಎರಡೂ ಬಾರಿ ಇಂಗ್ಲೆಂಡ್ ಗೆದ್ದಿದೆ. ಆದರೆ ಇವರಿಬ್ಬರೂ ಎಂಸಿಜಿಯಲ್ಲಿ ಟಿ 20 ಪಂದ್ಯವನ್ನು ಗೆದ್ದಿಲ್ಲ.
ಟಿ20 ಯಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಗರಿಷ್ಠ ಸ್ಕೋರ್ 232 ಮತ್ತು ಕಡಿಮೆ ಸ್ಕೋರ್ 89. ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ಅತ್ಯುತ್ತಮ ಸ್ಕೋರ್ 221. ಕಡಿಮೆ ಸ್ಕೋರ್ 135.
ಪಾಕಿಸ್ತಾನದ ನಾಯಕ ಬಾಬರ್ ಅಜಮ್ 560 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಾಕಿಸ್ತಾನಿ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಬಾಬರ್ ಇದೇ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ (66 ಎಸೆತಗಳಲ್ಲಿ ಔಟಾಗದೆ 110) ಗಳಿಸಿದ್ದರು.
ಹ್ಯಾರಿಸ್ ರೌಫ್ (14 ವಿಕೆಟ್) ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಪಾಕಿಸ್ತಾನದ ಬೌಲರ್. ಪಾಕ್ ವಿರುದ್ಧ ಇಂಗ್ಲೆಂಡ್ ಪರ ಗ್ರೇಮ್ ಸ್ವಾನ್ ಮತ್ತು ಆದಿಲ್ ರಶೀದ್ ತಲಾ 17 ವಿಕೆಟ್ ಕಬಳಿಸಿದರು.
ಒಟ್ಟಾರೆ ಉಭಯ ತಂಡಗಳ ನಡುವೆ 28 ಟಿ 20 ಪಂದ್ಯಗಳು ನಡೆದಿದ್ದು, ಇಂಗ್ಲೆಂಡ್ 18-9ರ ದಾಖಲೆಯೊಂದಿಗೆ ಮುನ್ನಡೆಯಲ್ಲಿದೆ.
T20 World cup: After 30 years, England vs Pakistan face off in the final…








