ಸೆಮಿಫೈನಲ್ ಲೈನ್ ಅಪ್ ಫಿಕ್ಸ್, ಬೆಸ್ಟ್ VS ಬೆಸ್ಟ್ ಫೈಟ್
ಟಿ20 ವಿಶ್ವಕಪ್ನಲ್ಲಿ ಲೀಗ್ ಹಂತದ ಎಲ್ಲಾ ಲೆಕ್ಕಾಚಾರಗಳು ಹೊರಬಿದ್ದಿವೆ.
ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್, ಫೆವರೀಟ್ ಟೀಮ್ ಇಂಡಿಯಾ ಮತ್ತು ಅಪಾಯಕಾರಿ ದಕ್ಷಿಣ ಆಫ್ರಿಕಾ ತಂಡಗಳು ಗ್ರೂಪ್ ಹಂತದಲ್ಲೇ ಮಕಾಡೆ ಮಲಗಿವೆ.
ಇನ್ನೇನಿದ್ದರೂ ಉಳಿದಿರುವುದು ಮೂರೇ ಮೂರು ಪಂದ್ಯ ಮತ್ತು ನಾಲ್ಕೇ ನಾಲ್ಕು ತಂಡಗಳು. ಎರಡು ಸೆಮಿಫೈನಲ್ ಪಂದ್ಯಗಳು ಈಗ ಕುತೂಹಲದ ಕೇಂದ್ರಬಿಂದುವಾಗಿದೆ.
ಸೆಮಿಫೈನಲ್ -01
ಇಂಗ್ಲೆಂಡ್ VS ನ್ಯೂಜಿಲೆಂಡ್
ಡೇಟ್: 10/10/2020
ಮೈದಾನ : ಅಬುದಾಭಿ
ಏಕದಿನ ವಿಶ್ವಕಪ್ನ ಫೈನಲ್ ಆಡಿದ್ದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಈಗ ಟಿ20 ವಿಶ್ವಕಪ್ನ ಸೆಮಿಫೈನಲ್ ಹೋರಾಟಕ್ಕೆ ಸಜ್ಜಾಗಿದೆ.
ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಟಿ20 ವಿಶ್ವಕಪ್ ಚಾಂಪಿಯನ್ ಆಗುವ ಕನಸಿನಲ್ಲಿದೆ.
ಇನ್ನೊಂದೆಡೆ ನ್ಯೂಜಿಲೆಂಡ್ ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಆಸೆ ಕಿವೀಸ್ ತಂಡಕ್ಕಿದೆ. ಹೀಗಾಗಿ ಅಬುದಾಭಿಯಲ್ಲಿ ರೋಚಕ ಫೈಟ್ ನಡೆಯೋದು ಖಚಿತ.
ಸೆಮಿಫೈನಲ್ -02
ಪಾಕಿಸ್ತಾನ VS ಆಸ್ಟ್ರೇಲಿಯಾ
ಡೇಟ್: 11/10/2020
ಮೈದಾನ: ದುಬೈ
2ನೇ ಸೆಮಿಫೈನಲ್ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವೆ ದುಬೈನಲ್ಲಿ ನೆಯಲಿದೆ.
ಗುರುವಾರ ನಡೆಯುವ ಈ ಹಣಾಹಣಿ ಕುತೂಹಲಕ್ಕೆ ಕಾರಣವಾಗಿದೆ.
ಪಾಕಿಸ್ತಾನ ಗ್ರೂಪ್ ಹಂತದಲ್ಲೆ 5ಕ್ಕೆ ಐದೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿದರೆ, ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆದ್ದರೂ ನೆಟ್ ರನ್ ರೇಟ್ ಆಧಾರದಲ್ಲಿ 4ರ ಘಟ್ಟ ಪ್ರವೇಸಿಸಿದೆ.
ಆಸ್ಟ್ರೇಲಿಯಾ ಐಸಿಸಿ ಟೂರ್ನಿಗಳಲ್ಲಿ ಬಲಿಷ್ಠ ತಂಡವಾದರೆ ಪಾಕಿಸ್ತಾನ ಯುಎಇನಲ್ಲಿ ಇಲ್ಲಿ ತನಕ ಸೋಲೇ ಕಾಣದ ತಂಡವಾಗಿದೆ. ಹೀಗಾಗಿ ಈ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿ ನಡೆಯುವುದು ಪಕ್ಕಾ.









