T20 World Cup: ಕ್ರಿಕೆಟ್ ಜನಕರಿಗೆ ಎರಡನೇ ಭಾರಿ T20 ಕಿರೀಟ…
T20 ವಿಶ್ವಕಪ್ 2022ರ ರೋಚಕ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎರಡನೇ ಭಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಇದೀಗ ಆಂಗ್ಲರು ಏಕದಿನ ಮತ್ತು ಟಿ 20 ಯಲ್ಲಿ ಹಾಲಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಎದುರಾಳಿ ಪಾಕಿಸ್ತಾನ ನೀಡಿದ 138 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು 19 ಓವರ್‌ಗಳಲ್ಲಿ ಮುಟ್ಟಿದರು. ಗುರಿ ಚಿಕ್ಕದಾಗಿದ್ದರೂ ಪಾಕಿಸ್ತಾನದ ಬೌಲರ್‌ಗಳು ಪಂದ್ಯವನ್ನು ಉಳಿಸಿಕೊಳ್ಳಲು ತಮ್ಮ ಶಕ್ತಿಮೀರಿ ಪ್ರಯತ್ನಿಸಿದರು. ಆದರೆ ನಿರ್ಣಾಯಕ ಸಮಯದಲ್ಲಿ ಯಾವುದೇ ವಿಕೆಟ್ ಬೀಳದ ಕಾರಣ ಇಂಗ್ಲೆಂಡ್ ಗೆಲುವು ಖಚಿತವಾಯಿತು.
ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳಲ್ಲಿ ಬೆನ್ ಸ್ಟೋಕ್ಸ್ ಮತ್ತೊಮ್ಮೆ ಬಿಗ್ ಮ್ಯಾಚ್ ಪ್ಲೇಯರ್ ಎನಿಸಿಕೊಂಡಿದ್ದಾರೆ. 49 ಎಸೆತಗಳಲ್ಲಿ 52 ರನ್ ಗಳಿಸಿ ಕೊನೆಯವರೆಗೂ ಕ್ರೀಸ್ ನಲ್ಲಿ ಕಚ್ಚಿ ನಿಂತರು. ಸ್ಯಾಮ್ ಕರ್ರಾನ್ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂಗ್ಲೆಂಡ್ ಬ್ಯಾಟಿಂಗ್: ಜೋಸ್ ಬಟ್ಲರ್ (26), ಅಲೆಕ್ಸ್ ಹೇಲ್ಸ್ (1), ಫಿಲಿಪ್ ಸಾಲ್ಟ್ (10), ಬೆನ್ ಸ್ಟೋಕ್ಸ್ (ಔಟಾಗದೆ 52), ಹ್ಯಾರಿ ಬ್ರೂಕ್ಸ್ (20), ಮೊಯಿನ್ ಅಲಿ (19), ಲಿಯಾಮ್ ಲಿವಿಂಗ್‌ಸ್ಟೋನ್ (ಔಟಾಗದೆ 1)
ಟಾಸ್ ಗೆದ್ದಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಗೆ ಬಂದ ಪಾಕ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತ್ತು. ಮಹತ್ವದ ಪಂದ್ಯದಲ್ಲಿ ಪಾಕ್ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸಿದರು.
ಶಾನ್ ಮಸೂದ್ 38 ರನ್ ಬಿಟ್ಟರೆ ಬೇರಾವ ಪಾಕಿಸ್ತಾನಿ ಬ್ಯಾಟ್ಸ ಮನ್ ಗಳು ಮಿಂಚಲಿಲ್ಲ. ಓಪನರ್ ಮೊಹಮ್ಮದ್ ರಿಜ್ವಾನ್ ಕೂಡ ಸ್ಯಾಮ್ ಕರ್ರನ್ ಎಸೆತದಲ್ಲಿ ಔಟಾದರು. ಮತ್ತೋರ್ವ ಆರಂಭಿಕ ಆಟಗಾರ ಪಾಕ್ ನಾಯಕ ಬಾಬರ್ ಅಜಮ್ ಕೂಡ 32 ರನ್ ಗಳಿಸಿ ಆದಿಲ್ ರಶೀದ್ ಬೌಲಿಂಗ್‌ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದರಿಂದಾಗಿ ಪಾಕಿಸ್ತಾನ ತಂಡ 45 ರನ್ ಗಳಿಗೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಹ್ಯಾರಿಸ್ 8 ರನ್ ಗಳಿಸಿದರೆ, ಇಫ್ತಿಕರ್ ಅಹ್ಮದ್ ಡಕ್ ಆಗಿ ಔಟಾಗಿ ಪಾಕ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದರು.
ಶಾನ್ ಮಸೂದ್ ಮಾತ್ರ 28 ಎಸೆತಗಳಲ್ಲಿ 38 ರನ್ ಗಳಿಸಿದರು. ಶಾದಾಬ್ ಖಾನ್ 20 ರನ್, ಮೊಹಮ್ಮದ್ ನವಾಜ್ 5 ರನ್ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ 4 ರನ್ ಗಳಿಸಿದರು. ಇದರಂತೆ… ಪಾಕಿಸ್ತಾನದ ಆರಂಭಿಕರಿಂದ ಹಿಡಿದು ಮಧ್ಯಮ ಕ್ರಮಾಂಕದವರೆಗೂ ಇಂಗ್ಲೆಂಡ್ ಬೌಲರ್‌ಗಳು ಮುಗಿಬಿದ್ದು, ಔಟ್ ಮಾಡಿದರು.
T20 World Cup Final 2022: ENG crowned champions, beat PAK by five wickets