ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2020 ಐಸಿಸಿ ಟಿ-20 ಮಹಿಳಾ ವಿಶ್ವಕಪ್ ಟೂರ್ನಿಗೆ ಭರ್ಜರಿ ಚಾಲನೆ ದೊರಕಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು, ಹರ್ಮನ್ ಪ್ರೀತ್ ಪಡೆ ಕಾಂಗರೂಗಳಿಗೆ ಗೆಲ್ಲಲು 133 ರನ್ ಗಳ ಟಾರ್ಗೆಟ್ ನೀಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಟೀಂ ಇಂಡಿಯಾದ ಆರಂಭಿಕರಾದ ಸ್ಮೃತಿ ಮಂದಾನ, ಶಫಾಲಿ ವರ್ಮಾ ಬೊಂಬಾಟ್ ಸ್ಟಾರ್ಟ್ ನೀಡಿದರು. ಸ್ಮೃತಿ ಜೊತೆ ಸೇರಿ ಶಫಾಲಿ 4 ಓವರ್ ಗಳಲ್ಲಿಯೇ ತಂಡದ ಮೊತ್ತವನ್ನು 40ರ ಗಡಿ ದಾಟಿಸಿದ್ರು. ಆದ್ರೆ ಈ ವೇಳೆ ಮಂದಾನ 11 ಎಸೆತಗಳಲ್ಲಿ 10 ರನ್ ಗಳಿಸಿ ಔಟ್ ಆದರು. ಇದರ ಬೆನ್ನಲ್ಲೆ ಬಿರುಸಿನ ಆಟವಾಡುತ್ತಿದ್ದ ಶಫಾಲಿ ಕೂಡ 15 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಿಡಿಸಿ 29 ರನ್ ಚಚ್ಚಿ ನಿರ್ಗಮಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 2 ರನ್ ಗೆ ಔಟ್ ಆಗಿ ನಿರಾಸೆ ಮೂಡಿಸಿದರು. ಈ ಸಂಕಷ್ಟದ ಸಂದರ್ಭ ಒಂದಾದ ಜೆಮಿಯಾ ರೋಡ್ರಿಗಸ್ ಹಾಗೂ ದೀಪ್ತಿ ಶರ್ಮಾ ತಂಡಕ್ಕೆ ಆಸರೆಯಾಗಿ ನಿಂತರು. ಅತ್ಯುತ್ತಮ ಜೊತೆಯಾಟ ಆಡಿದ ಇವರು ತಂಡದ ಮೊತ್ತವನ್ನು 100ಕ್ಕೆ ತಂದು ನಿಲ್ಲಿಸಿದರು. ರೋಡ್ರಿಗಸ್ 33 ಎಸೆತಗಳಲ್ಲಿ 26 ರನ್ ಗಳಿಸಿ ಔಟ್ ಆದರು. ಬಳಿಕ ದೀಪ್ತಿ ಶರ್ಮಾ ಬಿರುಸಿನ ಆಟದ ಮೊರೆ ಹೋದರೆ, ಇವರಿಗೆ ವೇದಾ ಕೃಷ್ಣಮೂರ್ತಿ ಸಾಥ್ ನೀಡಿದರು. ಅಂತಿಮ ಹಂತದಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದ ದೀಪ್ತಿ ತಂಡದ ರನ್ ಗತಿಯನ್ನು ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಂತಿಮವಾಗಿ ಭಾರತದ ವನಿತೆಯರ ತಂಡ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 132 ರನ್ ಕಲೆಹಾಕಿತು.
ಆಸ್ಟ್ರೇಲಿಯಾ ಪರ ಜೆಸ್ ಜಾನ್ಸೆನ್ 2 ವಿಕೆಟ್ ಕಿತ್ತರೆ, ಎಲ್ಸೆ ಪೆರ್ರಿ ಹಾಗೂ ಡೆಲಿಸ್ಸಾ ಕಿಮಿನ್ಸೆ ತಲಾ 1 ವಿಕೆಟ್ ಪಡೆದರು.
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








