ಕೊನೆಯ ಪಂದ್ಯಕ್ಕೂ ಮುನ್ನವೇ ಸೆಮಿಫೈನಲ್ ತಲುಪಿದ ಭಾರತ….
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ದಕ್ಷಿಣ ಆಫ್ರಿಕಾವನ್ನು 13 ರನ್ಗಳಿಂದ ಸೋಲಿಸಿತು. ನೆದರ್ಲೆಂಡ್ಸ್ನ ಗೆಲುವು ಗ್ರೂಪ್ 2 ರ ಸೆಮಿಫೈನಲ್ ಲೆಕ್ಕಾಚಾರವನ್ನೆ ಬದಲಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನವೆ ಭಾರತ ನೇರವಾಗಿ ಸೆಮಿಫೈನಲ್ ತಲುಪಿದೆ. ದಕ್ಷಿಣ ಆಫ್ರಿಕಾ ಸೆಮಿಫೈನಲ್ ರೇಸ್ನಿಂದ ಹೊರ ಬಿದ್ದಿದೆ.
ಅಡಿಲೇಡ್ನಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ 158 ರನ್ ಗಳಿಸಿತು. ಆ ನಂತರ ಆಫ್ರಿಕನ್ ಬ್ಯಾಟ್ಸ್ಮನ್ಗಳು 145 ರನ್ಗಳಿಗೆ ಸೀಮಿತಗೊಂಡರು.
ಇದೀಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ತಲುಪಲಿದೆ. ಇವರಿಬ್ಬರ ನಡುವಿನ ಪಂದ್ಯ ಈಗಾಗಲೇ ಅಡಿಲೇಡ್ನಲ್ಲಿ ಆರಂಭವಾಗಿದೆ.
ಗ್ರೂಪ್ 2 ಸೆಮಿಪೈನಲ್ ಲೆಕ್ಕಾಚಾರ
- ಪಾಯಿಂಟ್ಸ್ ಟೇಬಲ್ ಪ್ರಕಾರ ಟೀಂ ಇಂಡಿಯಾ ಅಗ್ರಸ್ಥಾನಲ್ಲಿದ್ದು, ತಂಡ ಸೆಮಿಫೈನಲ್ ಪ್ರವೇಶಿಸಿದೆ. 4 ಪಂದ್ಯಗಳ ಪೈಕಿ 3 ರಲ್ಲಿ ಗೆಲುವು ಸಾಧಿಸಿರುವ ಭಾರತ 6 ಅಂಕಗಳನ್ನ ಪಡೆದುಕೊಂಡಿದೆ. ಇಂದು ಭಾರತ ಜಿಂಬಾಬ್ವೆಯನ್ನು ಎದುರಿಸುತ್ತಿದೆ.
2. ನೆದರ್ಲೆಂಡ್ಸ್ ವಿರುದ್ಧ ಸೋತ ನಂತರ, ದಕ್ಷಿಣ ಆಫ್ರಿಕಾ ಪಾಯಿಂಟ್ ಪಟ್ಟಿಯಲ್ಲಿ 5 ಅಂಕಗಳನ್ನ ಹೊಂದಿದೆ. ತಂಡ ಟೂರ್ನಿಯಿಂದ ಹೊರಬಿದ್ದಿದೆ. ಕಾರಣಾಂತರಗಳಿಂದ ನಡೆಯುತ್ತಿರುವ ಪಾಕಿಸ್ತಾನ-ಬಾಂಗ್ಲಾದೇಶ ಪಂದ್ಯ ರದ್ದಾದರೆ ಆಫ್ರಿಕಾಗೆ ಅವಕಾಶ ಸಿಗಲಿದೆ.
3.ನೆದರ್ಲೆಂಡ್ಸ್ ಗೆಲುವಿನ ನಂತರ ಪಾಕಿಸ್ತಾನ-ಬಾಂಗ್ಲಾದೇಶಕ್ಕೆ ಅವಕಾಶ ಸಿಕ್ಕಿದೆ. ಇಬ್ಬರೂ 4-4 ಅಂಕಗಳನ್ನು ಹೊಂದಿದ್ದಾರೆ. ಹಾಗಾಗಿ ಈಗ ನಡೆಯುತ್ತಿರುವ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಸೆಮೀಸ್ ಅವಕಾಶ ಸಿಗಲಿದೆ.
T20 world cup: India reached the semi-finals before the last match.








