ಭಾರತ ತಂಡವನ್ನ ಚೋಕರ್ಸ್ ಎಂದು ಕರೆಯಬಹುದು – ಕಪಿಲ್ ದೇವ್…
ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡದ ವೈಫಲ್ಯದ ಬಗ್ಗೆ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ತಂಡದ ಪ್ರದರ್ಶನದ ಪ್ರಕಾರ ನಮ್ಮ ತಂಡವನ್ನು ಚೋಕರ್ಸ್ ಎಂದು ಕರೆಯಬಹುದು ಎಂದು ಭಾರತದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.
ತಂಡದಲ್ಲಿರುವ ಅನೇಕ ಯುವ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವ ಅಗತ್ಯವಿದೆ ಎಂದು ಮಾಜಿ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಕ್ರಿಕೆಟ್ ಭಾಷೆಯಲ್ಲಿ ಫೈನಲ್ ಗೆ ಬಂದು ಸೋಲನುಭವಿಸುವ ತಂಡಗಳನ್ನು ಚೋಕರ್ ಎಂದು ಕರೆಯುತ್ತಾರೆ. ಕಳೆದ ಆರು ವಿಶ್ವಕಪ್‌ಗಳಲ್ಲಿ ಭಾರತಕ್ಕೆ ಇದು ಐದನೇ ನಾಕೌಟ್ ಸೋಲು. ರೋಹಿತ್ ತಂಡವನ್ನ ಚೋಕರ್ಸ್ ಎಂದು ಕರೆಯುವುದರಲ್ಲಿ ತಪ್ಪೇನಿಲ್ಲ. ಆದರೆ, ನಮ್ಮ ತಂಡದ ಪ್ರದರ್ಶನದ ಬಗ್ಗೆ ಕಟುವಾದ ಪದಗಳನ್ನು ಬಳಸುವ ಅಗತ್ಯವಿಲ್ಲ. ಏಕೆಂದರೆ ಈ ಕೆಲವು ಆಟಗಾರರು ವರ್ಷಗಳಿಂದ ವೈಯಕ್ತಿಕವಾಗಿ ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರೆ. ಆದ್ದರಿಂದಲೇ ಇಂಗ್ಲೆಂಡ್ ವಿರುದ್ಧ ಸೆಮಿಯಲ್ಲಿ ಸೋತರೂ ಅವರನ್ನು ಕೆಟ್ಟದಾಗಿ ನಿಂದಿಸಬೇಡಿ ಎಂದು ಕಪಿಲ್ ಸಲಹೆ ನೀಡಿದ್ದಾರೆ.
ಭಾರತದ ಯುವ ಕ್ರಿಕೆಟಿಗರನ್ನು ವಿಶ್ವದಾದ್ಯಂತ ವಿವಿಧ ಟಿ 20 ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಪ್ರೋತ್ಸಾಹಿಸಬೇಕು ಎಂದು ಮಾಜಿ ಕೋಚ್ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ. 2024 ರಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಚುಟುಕು ವಿಶ್ವಕಪ್ ವೇಳೆಗೆ ಸಾಕಷ್ಟು ಅನುಭವ ಪಡೆಯಲಿದ್ದಾರೆ ಎಂದು ಕುಂಬ್ಲೆ ಅಭಿಪ್ರಾಯ ಪಟ್ಟಿದ್ದಾರೆ.
ವಯಸ್ಸಾದ ಆಟಗಾರರ ಸಂಖ್ಯೆ ಹೆಚ್ಚಾಗಿದೆ – ಜಡೇಜಾ
ಭಾರತ ತಂಡದಲ್ಲಿ ವಯಸ್ಸಾದ ಆಟಗಾರರ ಸಂಖ್ಯೆ ತುಂಬಾ ಹೆಚ್ಚಾಗಿದೆ ಎಂದು ಮಾಜಿ ಆಟಗಾರ ಅಜಯ್ ಜಡೇಜಾ ಹೇಳಿದ್ದಾರೆ. ಮನೆಯಲ್ಲಿ ಒಬ್ಬರೇ ಹಿರಿಯರು ಇರಬೇಕು. ಏಳು ಮಂದಿ ಹಿರಿಯರನ್ನು ಹೊಂದುವುದು ಕಷ್ಟ ಎಂದು ಅಜಯ್ ಜಡೇಜಾ ಪ್ರತಿಕ್ರಿಯಿಸಿದ್ದಾರೆ.
T20 world cup: Indian team can be called chokers – Kapil Dev…








