T20 World cup ಕೊಹ್ಲಿ – ಸೂರ್ಯಕುಮಾರ್ ಅದ್ಭುತ ಜೊತೆಯಾಟ
ನೆದರ್ ಲ್ಯಾಂಡ್ ವಿರುದ್ಧ ಭಾರತದ ಕ್ರಿಕೆಟ್ ಪಂದ್ಯ
20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟ
179 ರನ್ ಗಳ ಟಾರ್ಗೆಟ್ ನೀಡಿದ ಟೀಮ್ ಇಂಡಿಯಾ
ಕೊಹ್ಲಿ ,ಯಾದವ್ 48 ಎಸೆತಗಳಲ್ಲಿ 95 ರನ್ ಗಳ ಜೊತೆಯಾಟ
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ನಲ್ಲಿ ಇಂದು ಭಾರತ ನೆದರ್ ಲ್ಯಾಂಡ್ ತಂಡವನ್ನ ಎದುರಿಸುತ್ತಿದ್ದು , ಮೊದಲು ಭಾರತ ಬ್ಯಾಟಿಂಗ್ ಮಾಡಿದೆ.. ಭಾರತ 20 ಓವರ್ ಗಳಲ್ಲಿ 2 ವಿಕೆಟ್ ಗಳ ನಷ್ಟಕ್ಕೆ 179 ರನ್ ಗಳನ್ನ ಗಳಿಸಿದೆ… ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅದ್ಭುತ ಜೊತೆಯಾಟವಾಡಿ 48 ಬಾಲ್ ಗಳಲ್ಲಿ 95 ರನ್ ಗಳನ್ನ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ.. ಇನ್ನೂ ವಿರಾಟ್ ಕೊಹ್ಲಿ ಅದ್ಭುತ ಅರ್ಧ ಶತಕ ಗಳಿಸಿದ್ದು , ಅವರ ಬ್ಯಾಟಿಂಗ್ ಅನ್ನ ಸೂರ್ಯಕುಮಾರ್ ಯಾದವ್ ಹೊಗಳಿದ್ದಾರೆ..
ಸದ್ಯ ಪಾಕಿಸ್ತಾನದ ವಿರುದ್ಧ ಭಾರತ ರೋಚಕವಾಗಿ ಗೆದ್ದಿದ್ದು ಈ ಗೆಲುವಿನ ಮೂಲಕ ಕಿಂಗ್ ಕೊಹ್ಲಿ ಮತ್ತೊಮ್ಮಡ ಶೈನ್ ಆಗ್ತಿದ್ದಾರೆ.. ಯಾದವ್ ಮತ್ತು ಕೊಹ್ಲಿ ಇಬ್ಬರೂ ಅರ್ಧಶತಕಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದರು..
ಯಾದವ್ 25 ಎಸೆತಗಳಲ್ಲಿ 51 ರನ್ ಗಳಿಸಿದರೆ, ಭಾರತದ ಮಾಜಿ ನಾಯಕ 44 ಎಸೆತಗಳಲ್ಲಿ 62 ರನ್ ಗಳಿಸಿದರು. ಇಬ್ಬರೂ 48 ಎಸೆತಗಳಲ್ಲಿ 95 ರನ್ ಗಳಿಸಿದರು..
ಇದನ್ನು ಓದಿ : https://saakshatv.com/ind-vs-ned-23rd-…a-won-by-56-runs/








