T20 World Cup: ಬದಲಾಗಲಿದೆಯಾ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ – ಯಾರಿಗೆ ಚಾನ್ಸ್…
2022 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ಇಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್‌ನ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾರು ಬರಲಿದ್ದಾರೆ ಎನ್ನುವುದು ಸದ್ಯದ ಪ್ರಶ್ನೆ…
ಭಾರತ ತಂಡದಲ್ಲಿ ಎರಡು ಬದಲಾವಣೆಗಳನ್ನ ಕಾಣಬಹುದಾದ ಸಾಧ್ಯತೆ ಇದೆ. ಇಂಗ್ಲೆಂಡ್ ನ ಇಬ್ಬರು ಆಟಗಾರರು ಗಾಯಗೊಂಡಿರುವುದರಿಂದ ಅವರ ಪ್ಲೇಯಿಂಗ್ ಇಲೆವೆನ್ ಅಲ್ಲೂ ಬದಲಾವಣೆ ಸಾಧ್ಯತೆ ಇದೆ.
ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪಿಂಗ್ ಬಗ್ಗೆ ಹೇಳುವುದಾದರೆ, ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಒಟ್ಟಿಗೆ ಆಡುತ್ತಾರೆಯೇ ಅಥವಾ ಪಂತ್ ಎಡಗೈ ಬ್ಯಾಟ್ಸ್‌ಮನ್ ಆಗಿ ಅವಕಾಶ ಪಡೆಯುತ್ತಾರೆಯೇ ಎಂಬುದು ಇನ್ನೂ ದೊಡ್ಡ ಪ್ರಶ್ನೆಯಾಗಿದೆ. ಇದರ ಹೊರತಾಗಿ, ಮತ್ತೊಂದು ಬದಲಾವಣೆಯೆಂದರೆ, ಭಾರತ ತಂಡವು ತನ್ನ ಸ್ಪಿನ್ ವಿಭಾಗವನ್ನು ಬಲಪಡಿಸಲು ಅಕ್ಷರ್ ಪಟೇಲ್ ಬದಲಿಗೆ ಯುಜ್ವೇಂದ್ರ ಚಹಾಲ್‌ಗೆ ಅವಕಾಶ ನೀಡಬಹುದು. ಈ ಎರಡು ಬದಲಾವಣೆಗಳಿಗೆ ಭಾರತ ತಂಡದಲ್ಲಿ ಅವಕಾಶವಿದೆ.
ಟೀಮ್ ಇಂಡಿಯಾ ಸಾಂಭವ್ಯ ಪ್ಲೇಯಿಂಗ್ ಇಲೆವೆನ್…
ಕೆಎಲ್ ರಾಹುಲ್, ರೋಹಿತ್ ಶರ್ಮಾ (ಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್/ದಿನೇಶ್ ಕಾರ್ತಿಕ್ (ವಿಕೆ), ಅಕ್ಷರ್ ಪಟೇಲ್/ಯುಜ್ವೇಂದ್ರ ಚಾಹಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್
ಇನ್ನು ಇಂಗ್ಲೆಂಡ್ ತಂದ ಬಗ್ಗೆ ಮಾತನಾಡುವುದಾದರೆ ಗಾಯಂಡಿರುವ ಡೇವಿಡ್ ಮಲನ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಅವರ ಜಾಗದಲ್ಲಿ ಫಿಲ್ ಸಾಲ್ಟ್ ಗೆ ಅವಕಾಶ ಸಿದುವ ಸಾಧ್ಯತೆ ಇದೆ. ಬೌಲಿಂಗ್ ವಿಭಾಗದಲ್ಲೂ ಮಾರ್ಕ್ ವುಡ್ ಸಂಪೂರ್ಣ ಫಿಟ್ ಆದಂತೆ ಕಾಣುತ್ತಿಲ್ಲ. ಹಾಗಾಗಿ ಕ್ರಿಸ್ ಜೋರ್ಡನ್ ಪ್ಲೇಯಿಂಗ್ ಇಲೆವೆನ್ ಅಲ್ಲಿ ಸ್ಥಾನ ಪಡೆಯುಬಹುದು.
ಇಂಗ್ಲೆಂಡಿನ ಸಾಂಭಾವ್ಯ ಪ್ಲೇಯಿಂಗ್ ಇಲೆವೆನ್
ಅಲೆಕ್ಸ್ ಹೇಲ್ಸ್, ಜೋಸ್ ಬಟ್ಲರ್ (c & wk), ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಫಿಲ್ ಸಾಲ್ಟ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್/ಕ್ರಿಸ್ ಜೋರ್ಡಾನ್
T20 World Cup: Will Team India’s playing XI change – Who has a chance…








