ಟೈಗರ್ ಪಟೌಡಿ ಕುಟುಂಬದಿಂದ ಮತ್ತೊಬ್ಬ ಕ್ರಿಕೆಟಿಗನ ಉದಯ…!
ತೈಮೂರ್ ಸೈಫ್ ಆಲಿ ಖಾನ್…
ಬಾಲಿವುಡ್ ಖ್ಯಾತ ನಟ ಸೈಫ್ ಆಲಿ ಖಾನ್ ಮತ್ತು ನಟಿ ಕರಿನಾ ಕಪೂರ್ ಮಗ.
ನಾಲ್ಕು ವರ್ಷದ ತೈಮೂರು ಈಗ ಫುಲ್ ಫೇಮಸ್ ಆಗಿಬಿಟ್ಟಿದ್ದಾನೆ.
ಕರಿನಾ ಕಪೂರ್ ತೈಮೂರ್ ಬ್ಯಾಟ್ ಹಿಡಿದುಕೊಂಡು ಆಡುತ್ತಿರುವ ಫೋಟೋ ವೊಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಲ್ಲದೆ ಐಪಿಎಲ್ ನಲ್ಲಿ ಏನಾದ್ರೂ ಅವಕಾಶವಿದೆಯಾ ಅಂತ ಕೇಳಿದ್ದಾರೆ.
ಇದಕ್ಕೆ ಸಾಮಾಜಿಕ ಜಾಲ ತಾಣದ ಅಭಿಮಾನಿಗಳು ನಾನಾ ರೀತಿಯ ಕಮೆಂಟ್ ಗಳನ್ನು ಹಾಕಿದ್ದಾರೆ.
ಹಾಗೇ ನೋಡಿದ್ರೆ ತೈಮೂರ್ ರಕ್ತದಲ್ಲೇ ಕ್ರಿಕೆಟ್ ಇದೆ. ಹಾಗಂತ ಸೈಫ್ ಆಲಿ ಖಾನ್ ಕ್ರಿಕೆಟಿಗನಲ್ಲ. ಆದ್ರೂ ನಟನಾಗುವುದಕ್ಕಿಂತ ಮುನ್ನ ಕ್ರಿಕೆಟ್ ಆಟದ ಗ್ರಾಮರ್ ಗಳನ್ನು ಕಲಿತುಕೊಂಡಿದ್ದರು.
ಇದಕ್ಕೆ ಕಾರಣವೂ ಇದೆ. ತೈಮರ್ ಅಜ್ಜ, ಸೈಫ್ ಆಲಿ ಖಾನ್ ತಂದೆ ಮನ್ಸೂರ್ ಆಲಿ ಖಾನ್ ಅದ್ಭುತ ಕ್ರಿಕೆಟಿಗನಾಗಿದ್ದರು. ಅಲ್ಲದೆ ಭಾರತ ತಂಡದ ನಾಯಕನಾಗಿದ್ದರು.
ಮನ್ಸೂರ್ ಆಲಿ ಖಾನ್ ಅಂದ್ರೆ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಆಯಾಮವನ್ನು ನೀಡಿದ್ದ ನಾಯಕ. ಭಾರತೀಯ ಕ್ರಿಕೆಟ್‍ಗೆ ಆಕ್ರಮಣಕಾರಿ ಪ್ರವೃತ್ತಿಯನ್ನು ಕಲಿಸಿದ ಮೊದಲ ನಾಯಕನೂ ಹೌದು.
ಟೈಗರ್ ಪಟೌಡಿ ಎಂದೇ ಪ್ರಖ್ಯಾತರಾಗಿದ್ದ ಮನ್ಸೂರ್ ಆಲಿ ಖಾನ್ ಪಟೌಡಿ ಅವರು ಭಾರತ ಕ್ರಿಕೆಟ್ ಗೆ ನೀಡಿರುವ ಕೊಡುಗೆ ಅನನ್ಯ.
ಇನ್ನು ಮನ್ಸೂರ್ ಆಲಿ ಖಾನ್ ಪಟೌಡಿ ಅವರ ತಂದೆ ಇಫ್ತಿಕಾರ್ ಆಲಿ ಖಾನ್ ಕೂಡ ಕ್ರಿಕೆಟ್ ಆಟಗಾರ. ಇಫ್ತಿಕಾರ್ ಆಲಿ ಖಾನ್ ಇಂಗ್ಲೆಂಡ್ ಮತ್ತು ಭಾರತ ತಂಡದ ಪರ ಆಡಿದ್ದರು.
ಹೀಗಾಗಿ ತೈಮೂರ್ ಕೂಡ ಕ್ರಿಕೆಟಿಗನಾದ್ರೆ ಅಚ್ಚರಿ ಏನಿಲ್ಲ. ಆದ್ರೆ ಮಗನ ಬಗ್ಗೆ ಸೈಫ್ ಆಲಿ ಖಾನ್ ಹೇಳುವುದೇ ಬೇರೆ. ಅಮ್ಮ ಕರಿನಾ ಕಪೂರ್ ಹೇಳುವುದೇ ಬೇರೆ.
ತೈಮೂರ್ ಬಗ್ಗೆ ಸೈಫ್ ಆಲಿ ಖಾನ್ ಹೇಳುವುದು ಹೀಗೆ.
ಸೈಫ್ ಆಲಿ ಖಾನ್‍ಗೆ ತನ್ನ ಮಗನನ್ನು ನಟನನ್ನಾಗಿಸಬೇಕು ಅನ್ನೋ ಬಯಕೆ ಇದೆ. ತೈಮೂರ್ ಗೆ ಕ್ರಿಕೆಟ್ ಅಥವಾ ಫುಟ್ ಬಾಲ್ ನಲ್ಲಿ ಅಷ್ಟೊಂದು ಆಸಕ್ತಿ ಇಲ್ಲ. ಬದಲಾಗಿ ರಾಮಾಯಣ ಬಗ್ಗೆ ಹೆಚ್ಚಿನ ಆಸಕ್ತಿ ಇದೆ ಅಂತ ಹೇಳುತ್ತಾರೆ.
ಇನ್ನು ಕರಿನಾ ಕಪೂರ್ ತನ್ನ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಬೇಕು ಅಂತ 2018ರ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದಕ್ಕೆ ಪೂರಕವಾಗಿ ತೈಮೂರ್ ಕೈಯಲ್ಲಿ ಕರಿನಾ ಕಪೂರ್ ಬ್ಯಾಟ್ ಹಿಡಿಯುವಂತೆ ಮಾಡಿದ್ದರು. ವಿಶೇಷತೆ ಅಂದ್ರೆ ತೈಮೂರ್ ಹಿಡಿದಿರುವ ಬ್ಯಾಟ್ ಆತನಿಗಿಂತ ದೊಡ್ಡದಾಗಿತ್ತು.
ಒಟ್ಟಿನಲ್ಲಿ ತೈಮೂರ್ ಕ್ರಿಕೆಟ್ ಆಟಗಾರನಾಗುತ್ತಾನೋ ಇಲ್ಲವೋ ಗೊತ್ತಿಲ್ಲ. ಆದ್ರೆ ಕ್ರಿಕೆಟ್ ಆಟ ಅವರ ಕುಟುಂಬದ ರಕ್ತದಲ್ಲೇ ಇದೆ.
ಹೀಗಾಗಿ ಮುಂದೊಂದು ದಿನ ತೈಮೂರ್ ಕ್ರಿಕೆಟಿಗನಾದ್ರೂ ಅಚ್ಚರಿ ಇಲ್ಲ. ಯಾರಿಗೆ ಗೊತ್ತು. ತೈಮೂರ್ ಹಣೆಬರೆಹದಲ್ಲಿ ಏನು ಬರೆದಿದೆ ಅಂತ…








