ಹಳಿ ತಪ್ಪಿದ ರೈಲು – 36 ಕ್ಕೂ ಹೆಚ್ಚು ಮಂದಿ ಸಾವು , 70ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..!
ತೈವಾನ್ : ರೈಲು ಹಳಿ ತಪ್ಪಿ ರೈಲ್ವೆ ಮಾರ್ಗದ ಸುರಂಗದಲ್ಲಿ ಭೀಕರ ದುರಂತ ಸಂಭವಿದ್ದು, ಘಟನೆಯಲ್ಲಿ ಸುಮಾರು 36 ಮಂದಿ ಮೃತಪಟ್ಟಿದ್ದರೆ, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಈ ಘಟನೆ ತೈವಾನ್ ನ ಹುವಾಲಿಯನ್ ನ ಪೂರ್ವ ರೈಲ್ವೆ ಮಾರ್ಗದ ಸುರಂಗದಲ್ಲಿ ನಡೆದಿದೆ.
ಬೆಳಗ್ಗೆ 9.30ಕ್ಕೆ ಈ ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ರೈಲಿನ ಸುಮಾರು 5ಕ್ಕೂ ಹೆಚ್ಚು ಬೋಗಿಗಳು ಜಖಂ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.
ಇನ್ನು ಅಪಘಾತದ ತೀವ್ರತೆ ದೊಡ್ಡ ಪ್ರಮಾಣದ್ದು ಎಂದು ಹೇಳಲಾಗುತ್ತಿದ್ದು, ಸ್ವತಃ ತೈವಾನ್ ಅಧ್ಯಕ್ಷರಾದ ತ್ಸೈ ಇಂಗ್-ವೆನ್ ಅವರು ಹುವಾಲಿಯನ್ ಆಸ್ಪತ್ರೆಗಳಿಗೆ ಬೃಹತ್ ಪ್ರಮಾಣದ ಚಿಕಿತ್ಸೆಗೆ ಸಿದ್ಧರಾಗಿ ಎಂದು ಸೂಚನೆ ನೀಡಿದ್ದಾರೆ.
ಭಾರತೀಯ ಸೇನೆಗಾಗಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ ಪಡಿಸಿದ ಡಿಎಂಎಸ್ಆರ್ಡಿಇ
ಮತ್ತೆ ಲಾಕ್ ಡೌನ್ ಫಿಕ್ಸ್..? ಒಂದೇ ದಿನ ದೇಶದಲ್ಲಿ ಪತ್ತೆಯಾಯ್ತು 81 ಸಾವಿರ ಕೇಸ್..!








