ತಾಜ್ ಮಹಲ್ ನಲ್ಲಿ ಶಿವನಪೂಜೆ : ಮೂವರ ಬಂಧನ..!
ಆಗ್ರಾ : ಪ್ರಸಿದ್ಧ ಹಾಗೂ ಐತಿಹಾಸಿಕ ಪ್ರೇಕ್ಷಣನೀಯ ಸ್ಥಳವಾಗಿರುವ ತಾಜ್ ಮಹಲ್ ಆವರಣದಲ್ಲಿ ಶಿವನ ಪೂಜೆ ಮಾಡಲು ಮುಂದಾಗಿದ್ದ ಹಿನ್ನೆಲೆ ಹಿಂದೂಮಹಾಸಭಾದ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಮೂವರು ಬಂಧತರ ಪೈಕಿ ಓರ್ವ ಮಹಿಳೆಯೂ ಇದ್ದು, ಇವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಮೊದಲೇ ತಾಜ್ ಮಹಲ್ ವಿರುದ್ಧ ಅನೇಕ ವಾದ ವಿವಾದಗಳು ಸೃಷ್ಟಿಯಾಗ್ತಿವೆ. ತಾಜ್ಮಹಲ್ ಷಹಜಹಾನ್ ಕಟ್ಟಿಸದ ಸ್ಮಾರಕವಲ್ಲ. ಅದು ಮೂಲತಃ ಹಿಂದೂ ದೇವಾಲಯ. ತೇಜೋಮಹಲ್ ಎಂಬ ಹೆಸರನ್ನು ಸಮಾಧಿಯನ್ನಾಗಿ ಬದಲಿಸಿ ತಾಜ್ಮಹಲ್ ಮಾಡಲಾಯಿತು ಎಂದು ಅನೇಕ ಹಿಂದೂಪರ ಸಂಘಟನೆಗಳು ಪ್ರತಿಪಾದಿಸಿವೆ. ಈ ನಡುವೆ ಶಿವನ ಪೂಜೆ ಮುಂದಾಗಿದ್ದು, ಕೋಮು ಗಲಭೆಗೆ ಕಾರಣವಾಗಬಹುದೆಂಬ ಹಿನ್ನೆಲೆ ಬಂಧಿಸಲಾಗಿದೆ. ಹಿಂದೂ ಮಹಾಸಭಾದ ಪ್ರಾಂತೀಯ ಅಧ್ಯಕ್ಷೆ ಮೀನಾ ದಿವಾಕರ್ ಅವರು, ಶಿವರಾತ್ರಿಯ ಹಿನ್ನೆಲೆ ಇನ್ನಿಬ್ಬರ ಜೊತೆಗೂಡಿ ತಾಜ್ ಮಹಲ್ ಆವರಣದಲ್ಲಿನ ಮುಖ್ಯ ತೊಟ್ಟಿ ಸಮೀಪದ ಬೆಂಚ್ ಒಂದರ ಮೇಲೆ ಶಿವಪೂಜೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಮೂವರನ್ನೂ ಬಂಧಿಸಲಾಗಿದೆ. ಸ್ಮಾರಕ ರಕ್ಷಣೆಗಾಗಿ ನಿಯೋಜಿಸಲಾಗಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಈ ಮೂವರನ್ನು ಬಂಧಿಸಿದ್ದಾರೆ.
ಆಂಜನೇಯ ಸ್ವಾಮಿಯ ಈ ಒಂದು ಶಕ್ತಿಶಾಲಿ ಮಂತ್ರ ಮನುಷ್ಯನ ಎಲ್ಲ ಸಮಸ್ಯೆಗಳನ್ನ ತಕ್ಷಣಕ್ಕೆ ನಿವಾರಣೆ ಮಾಡುವಂತಹ ಶಕ್ತಿ ಹೊಂದಿದೆ ..!!