ಕರ್ನಾಟಕ ಬಂದ್ ಕರೆ ಹಿಂದಕ್ಕೆ ತೆಗೆದುಕೊಳ್ಳಿ Karnataka bandh saaksha tv
ಬೆಳಗಾವಿ : ಎಂಇಎಸ್ ಸಂಘಟನೆಯನ್ನು ನಿಷೇಧಿಸಿ ಎಂದು ಒತ್ತಾಯಿಸಿ ಕನ್ನಡಪರ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಲವು ಕನ್ನಡ ಸಂಘಟನೆಗಳು ಡಿಸೆಂಬರ್ 31ಕ್ಕೆ ಬಂದ್ ಗೆ ಕರೆ ನೀಡಿವೆ.
ಆದ್ರೆ ಈ ಬಂದ್ ಗೆ ಬೆಳಗಾವಿಯಲ್ಲಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ವಿರೋಧ ವ್ಯಕ್ತಪಡಿಸಿ, ಬಂದ್ ಕರೆ ಹಿಂದಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಎಂಇಎಸ್ ನಿಷೇಧ ಕಾನೂನು ಚೌಕಟ್ಟಿನಲ್ಲಿ ಮಾಡಬೇಕು.
ದಿಢೀರ್ ನಿರ್ಧಾರ ಕೈಗೊಂಡರೇ ಕೋರ್ಟ್ ನಲ್ಲಿ ಹಿನ್ನಡೆಯಾಗೋ ಸಾಧ್ಯತೆ ಇದೆ. ಹೀಗಾಗಿ ಬಂದ್ ಕರೆಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ.
ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸದನದಲ್ಲಿ ಎಂಇಎಸ್ ವಿರುದ್ಧ ಮಾತನಾಡಿದ್ದು, ಗುಂಡಾ ಕಾಯ್ದೆ, ದೇಶದ್ರೋಹದ ಕಾಯ್ದೆ ಕೇಸ್ ದಾಖಲಿಸುವ ಬಗ್ಗೆ ಭರವಸೆ ನೀಡಿದ್ದಾರೆ.
ಆದರೇ ಈವರೆಗೆ ಮುಖ್ಯಮಂತ್ರಿ ಬೊಮ್ಮಾಯಿ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಬಂದ್ ಬದಲಾಗಿ ಬೇರೆ ರೀತಿ ಒತ್ತಡ ತರಬೇಕು. ಸಾಮಾನ್ಯ ಜನರಿಗೆ ತೊಂದರೆ ಮಾಡಿ ಯಾವುದೇ ಹೋರಾಟ ಮಾಡಿದ್ರು ಯಶಸ್ವಿ ಆಗಲ್ಲ.
ಮರಾಠಿಗರು ಮುಖ್ಯವಾಹಿನಿಗೆ ಬಂದಿದ್ದಾರೆ. ಎಂಇಎಸ್ ಸಣ್ಣ ಗುಂಪು. ಎಂಇಎಸ್ ಮೇಲೆ ನಿಗಾ ವಹಿಸೊದು ದೊಡ್ಡ ವಿಷಯವಲ್ಲ.
ಎಂಇಎಸ್ ನಾಯಕರನ್ನು ಬೇಲ್ ಕೊಡೋ ನಾಯಕರು ನಮ್ಮ ರಾಜ್ಯದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.