ಸಚಿನ್ ತೆಂಡುಲ್ಕರ್… ಟೀಮ್ ಇಂಡಿಯಾದ ಮಾಜಿ ಆಟಗಾರ. ವಿಶ್ವ ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ, ದಾಖಲೆಗಳು ಎಂದೆಂದಿಗೂ ನೆನಪಿನ ಪುಟದಲ್ಲಿರುತ್ತವೆ. ಅಂತಹ ಸಚಿನ್ ಔಟಾಗಲಿ, ಶತಕವನ್ನೇ ಸಿಡಿಸಲಿ.. ಅವರ ಆಟವನ್ನು ನೋಡುವುದೇ ಚೆಂದ. ಹಾಗೇ ಅವರ ಮಾತು ಕೂಡ. ಯಾಕಂದ್ರೆ ಅವರು ಆಡುತ್ತಿದ್ದ ಆಟದಂತೆ ಅವರ ಹೇಳುತ್ತಿರುವ ಪ್ರತಿ ಪದಗಳಿಗೂ ಒಂದು ತೂಕವಿರುತ್ತೆ.
ಸಚಿನ್ ಆಟ ಎಷ್ಟು ಸ್ಪೂರ್ತಿ, ಪ್ರೇರಣೆಯಾಗುತ್ತೋ ಅದೇ ರೀತಿ ಅವರು ಹೇಳುವ ಮಾತಿನಲ್ಲೂ ಅಷ್ಟೊಂದು ಪ್ರಬುದ್ಧತೆ ಇರುತ್ತೆ. ಕ್ರಿಕೆಟ್‍ಗೆ ವಿದಾಯ ಹೇಳಿದ ನಂತರ ಸಚಿನ್ ತನ್ನ ಕುಟುಂಬದ ಜೊತೆ ಕಾಲ ಕಳೆಯುತ್ತಾ, ಕ್ರಿಕೆಟ್‍ನ ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲ ತಾಣದಲ್ಲೂ ಬಿಝಿಯಾಗಿರುತ್ತಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಸಚಿನ್ ತಮ್ಮ ಅಭಿಮಾನಿಗಳಿಗೆ ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಪ್ರೇರಣೆಯಾಗುತ್ತಿದ್ದಾರೆ.
ಅದ್ರಲ್ಲೂ ಲಾಕ್ ಡೌನ್ ಟೈಮ್ ನಲ್ಲಿ ಅಡುಗೆ ಮಾಡಿಕೊಂಡು. ಚಾರಿಟಿ ವರ್ಕ್ ಮಾಡ್ಕೊಂಡು, ಮಗನ ಹೇರ್ ಕಟ್ ಮಾಡ್ಕೊಂಡು ಗಮನ ಸೆಳೆದಿದ್ದಾರೆ. ಅದೇ ರೀತಿ ಕೆಲವೊಂದು ಅವಿಸ್ಮರಣೀಯ ಪಂದ್ಯಗಳನ್ನು ನೆನಪು ಮಾಡಿಕೊಂಡಿದ್ರು. ಅಷ್ಟೇ ಅಲ್ಲ, ತಮ್ಮ ಒಡನಾಡಿಗಳ ಸವಾಲಿಗೂ ಪ್ರತ್ಯುತ್ತರ ನೀಡುತ್ತಾ ಕಾಲ ಕಳೆಯುತ್ತಿದ್ದಾರೆ. ಇದೀಗ ಅಪ್ಪ – ಅಮ್ಮನನ್ನು ಹೇಗೆ ನೋಡಿಕೊಳ್ಳಬೇಕು ಎಂಬುದುರ ಬಗ್ಗೆ ಅರ್ಥಪೂರ್ಣ ಸಂದೇಶವನ್ನು ತನ್ನ ಸಾಮಾಜಿಕ ಜಾಲ ತಾಣದಲ್ಲಿ ಹಾಕೊಂಡಿದ್ದಾರೆ. ಅಲ್ಲದೆ ಒಂದು ಹಳೆಯ ಫೋಟೋ ಹಾಕೊಂಡಿದ್ದಾರೆ.
ಹೌದು, ಇದು ಹಳೆಯ ಫೋಟೋ. ಕಪ್ಪು-ಬಿಳುಪು ಫೋಟೋ. ಆದ್ರೆ ಈ ಫೋಟೋ ಮಾತ್ರ ಭಾವನೆಗಳನ್ನು ತುಂಬಿಕೊಂಡಿದೆ. ಈ ಚಿತ್ರವನ್ನು ನೋಡಿ ವರ್ಣಿಸಲು ಅಥವಾ ವಿಮರ್ಷೆ ಮಾಡಲು ಪದಗಳಿಂದ ಸಾಧ್ಯವಿಲ್ಲ. ಯಾಕಂದ್ರೆ ಒಬ್ಬ ಮಗನಿಗೆ ಅಪ್ಪ -ಅಮ್ಮನಿಂದ ಸಿಗುವಂತಹ ಪ್ರೀತಿ, ಮಮಕಾರ, ಸಲುಗೆ ಹೀಗೆ ಪ್ರತಿಯೊಂದು ಅಂಶಗಳನ್ನು ಈ ಒಂದು ಫೋಟೋದಿಂದ ಸಾಧ್ಯ. ಅಷ್ಟಕ್ಕೂ ಈ ಫೋಟೋದಲ್ಲಿ ಏನಿದೆ. ಬಹುಶಃ ಸಚಿನ್ ಯಾವ ವಯಸ್ಸಿನಲ್ಲಿ ತೆಗೆದ ಫೋಟೋ ಅಂತ ಗೊತ್ತಿಲ್ಲ. ತಾಯಿಯ ಮಡಿಲಲ್ಲಿ ತಲೆಯನ್ನಿಟ್ಟು, ಅಪ್ಪನ ತೊಡೆಯ ಮೇಲೆ ಕಾಲನ್ನು ಇಟ್ಟು ಚಿಕ್ಕ ಮಗುವಿನಂತೆ ಮಲಗಿಕೊಂಡಿರುವ ಫೋಟೋ. ಅಪ್ಪ-ಅಮ್ಮನಷ್ಟು ಬೆಳೆದು ಎತ್ತರವಾಗಿದ್ರೂ ಅಪ್ಪ-ಅಮ್ಮನಿಗೆ ಇನ್ನೂ ಚಿಕ್ಕ ಮಗುವೇ ಎಂಬಂತೆಯೂ ಭಾಸವಾಗುತ್ತಿದೆ.
ಇನ್ನು ಈ ಫೋಟೋದ ಟ್ಯಾಗ್ ಲೈನ್ ಸಚಿನ್ ತೆಂಡುಲ್ಕರ್ ಸಂದೇಶ ಹೀಗಿದೆ. ನಮ್ಮ ತಂದೆ ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಏಳಿಗೆಯ ಪ್ರತಿ ಹಂತದಲ್ಲೂ ಅವರ ಬೆಂಬಲವಿರುತ್ತದೆ. ಒಬ್ಬ ವ್ಯಕ್ತಿಯನ್ನಾಗಿ ರೂಪಿಸಲು ನಮಗೆ ಭದ್ರ ಅಡಿಪಾಯ ಹಾಕಿಕೊಡುತ್ತಾರೆ. ಹಾಗೇ ನನ್ನ ಬದುಕು ಕೂಡ. ಇವತ್ತೂ ನಾನು ಏನು ಆಗಿದ್ದೇನೋ ಅದಕ್ಕೆ ನನ್ನ ಹೆತ್ತವರೇ ಕಾರಣ ಅವರ ಬೆಂಬಲ, ಪ್ರೀತಿ, ಪ್ರೋತ್ಸಾಹ ಇಲ್ಲದಿದ್ರೆ ನಾನು ಈ ಮಟ್ಟಕ್ಕೆ ಬೆಳೆಯಲು ಆಗುತ್ತಿರಲಿಲ್ಲ ಎಂಬ ಅರ್ಥದಲ್ಲಿ ಸಚಿನ್ ಹೇಳಿದ್ದಾರೆ.
ಅಷ್ಟೇ ಅಲ್ಲ, ನಾವು ಇಂದಿನ ಕಠಿಣ ಸಮಯದಲ್ಲಿ ನಮ್ಮ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದು ನಮ್ಮ ಜವಾಬ್ದಾರಿ ಕೂಡ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾಕಂದ್ರೆ ನಾವು ಸಂದಿಗ್ದ ಸಮಯದಲ್ಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ತಾಯಿ ಈಗ ಇದ್ದಾರೆ. 1999 ವಿಶ್ವಕಪ್ ವೇಳೆ ಸಚಿನ್ ತೆಂಡುಲ್ಕರ್ ಅವರು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ತಂದೆಯ ಕಾರ್ಯವನ್ನು ಮುಗಿಸಿ ಮತ್ತೆ ವಿಶ್ವಕಪ್ ನಲ್ಲಿ ಸಚಿನ್ ಆಡಿದ್ದರು.
ಅಲ್ಲದೆ ಸಚಿನ್ ತೆಂಡುಲ್ಕರ್ ಅವರ ಕ್ರಿಕೆಟ್ ಆಟಕ್ಕೆ ತಂದೆ ರಮೇಶ್ ತೆಂಡುಲ್ಕರ್ ತುಂಬಾನೇ ಪ್ರೋತ್ಸಾಹ ನೀಡಿದ್ದರು. ಅದೇ ರೀತಿ ತಾಯಿ ಕೂಡ. ನೆನಪಿರಬಹುದು. ಬಹುಶಃ ಸಚಿನ್ ಆಟವನ್ನು ಮೊದಲ ಬಾರಿ ಅವರ ತಾಯಿ ನೋಡಿದ್ದು ಸಚಿನ್ ತೆಂಡುಲ್ಕರ್ ಅವರ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅಂತ ಕಾಣುತ್ತೆ. ಮಗ ವಿದಾಯದ ಮಾತುಗಳನ್ನು ಹೇಳಿದ್ದಾಗ ಸಚಿನ್ ತಾಯಿ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು,








