ಅಫ್ಗಾನ್ – ಮಕ್ಕಳನ್ನ ಮುಳ್ಳಿನ ತೊಂತಿಗಳ ಮೇಲಿಂದ ಎಸೆಯುತ್ತಿರುವ ತಾಯಂದಿರು
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಉಗ್ರರೇ ಅಲ್ಲ ಪಾಪ ಸಾಮಾನ್ಯ ನಾಗರಿಕರು ಎಂದಿದ್ರು ಈ ಹಿಂದೆ ಪಾಕ್ ನ ಪ್ರದಾನಿ ಇಮ್ರಾನ್ ಸಾಹೇಬ್ರು.. ಇದೀಗ ಅಫ್ಗಾನ್ ನಲ್ಲಿ ಉಗ್ರರ ಸರ್ಕಾರ ರಚನೆಯಾಗಿದೆ.. ಪರೋಕ್ಷವಾಗಿ ತಾಲೀಬಾನಿಗಳನ್ನ ಕಪಟಿ ಚೀನಾ , ಉಗ್ರರ ಡ್ಯಾಡಿ ಪಾಕಿಸ್ತಾನ ಬೆಂಬಲಿಸಿವೆ.
ತಮ್ಮ ದೇಶದ ಜನ ಬಿಕಾರಿಯಾದ್ರೂ ಪರವಾಗಿಲ್ಲ ಉಗ್ರರು ಚನ್ನಾಗಿದ್ರೆ ಸಾಕು ಅನ್ನೋದು ಪಾಕಿಸ್ತಾನದ ಧ್ಯೇಯೋದ್ದೇಶ.. ಅದಕ್ಕೆ ನೋಡಿ ತಮ್ಮ ದೇಶ ಬಿಕಾರಿಯಾದ್ರೂ ತನ್ನ ಡ್ಯಾಡಿ ಚೀನಾ ಬಳಿ ಕೈ ಕಾಲಿಡಿದು ಸಾಲ ಸೂಲ ಮಾಡಿ ಉಗ್ರರ ಪೋಷಣೆ ಮಾಡುತ್ತಿದೆ.. ಆದ್ರೆ ಮುಸ್ಲಿಂ ರಾಷ್ಟ್ರಗಳಿಗೆ ತಮ್ಮ ಬೆಂಬಲ ಅನ್ನೋ ಮಾನ್ಯ ಇಮ್ರಾನ್ ಖಾನ್ ಅವರು ಮುಸ್ಲಿಂ ರಾಷ್ಟ್ರದ ಜನರಿಗೆ ತಾಲೀಬಾನಿಗಳು ನರಕ ದರ್ಶನ ಮಾಡಿಸುತ್ತಿದ್ರು ತುಟಿ ಬಿಚ್ಚದೇ ಮೌನ ವಹಿಸಿದ್ದಾರೆ.. ಬದಲಾಗಿ ತಾಲಿಬಾನಿಗಳ ವಿಜಯದಲ್ಲಿ ಗೆಲುವಿನ ನಗೆ ಬೀರುತ್ತಿದ್ದಾರೆ..
ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ.. ಮತ್ತೊಂದೆಡೆ ಮಹಿಳೆಯರು ಮಕ್ಕಳ ಗೋಳಾಟ ಹೇಳತೀರದ್ದಾಗಿದೆ. ತಾಲಿಬಾನ್ ಉಗ್ರರಿಂದ ತಮ್ಮ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಕಾಬೂಲ್ ನಲ್ಲಿರುವ ಅಫ್ಗಾನಿಸ್ತಾನ ಮಹಿಳೆಯರು ತಮ್ಮ ಮಕ್ಕಳನ್ನು ಕಾಬೂಲ್ ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಬಳಿಯ ಮುಳ್ಳುತಂತಿಯ ತಡೆಗೋಡೆಗಳ ಮೇಲೆ ಎಸೆದಿರುವ ಭಯಾನಕ ದೃಶ್ಯಗಳ ಪೋಟೋ ವಿಡಿಯೋಗಳು ವೈರಲ್ ಆಗ್ತಿವೆ.
ಗುರುವಾರವೂ ಸಹ ಕಾಬೂಲ್‌ನ ಮುಖ್ಯ ವಿಮಾನ ನಿಲ್ದಾಣದಲ್ಲಿ ಮುಗಿಬಿದ್ದಿದ್ದ ಪ್ರಯಾಣಿಕರು ದೇಶ ಬಿಟ್ಟು ಹೇಗಾದರೂ ಹೊರ ಹೋಗಲು ಪ್ರಯತ್ನಿಸಿದ್ದಾರೆ. ತಾವು ಅಲ್ಲದೇ ಹೋದ್ರು ಕಡೆ ಪಕ್ಷ ನಮ್ಮ ಮಕ್ಕಳಿಗಾದ್ರೂ ಈ ನರಕದಿಂದ ಮುಕ್ತಿ ಸಿಗಲೆಂದು ಮಕ್ಕಳನ್ನ ಮುಳ್ಳಿನ ತಂತಿಗಳ ಮೇಲಿಂದ ಆಚೆಕಡೆ ಎಸೆಯುತ್ತಿದ್ದಾರೆ..
ಅಫ್ಘಾನಿಸ್ತಾನ ಬಿಕ್ಕಟ್ಟು: ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಹೇಳಿದ್ದೇನು..?