ತಾಲಿಬಾನ್ ಹಿಡಿತಲ್ಲಿನ ಅಫ್ಗಾನಿಸ್ತಾನಕ್ಕೆ ವೈದ್ಯಕೀಯ ನೆರವು ಪೂರೈಕೆ ವಿಳಂಬ – WHO
ಸ್ಮಾಶಾಣದಂತಾಗಿರುವ ಅಫ್ಘಾನಿಸ್ತಾನದಲ್ಲಿ ಹಿಡಿತ ಸಾಧಿಸಿರುವ ತಾಲಿಬಾನ್ ರಾಕ್ಷಸರ ಕೈ ಕೆಳಗೆ ಸಿಲುಕಿ ಜನರು ಕ್ಷಣಕ್ಷಣಕ್ಕೂ ಸಾಯುವಂತಾಗಿದೆ. ಅಫ್ಗಾನಿಸ್ತಾನದಲ್ಲಿ ತನ್ನ ಸೇನೆ ಹಿಂಪಡೆಯುವ ಅಮೆರಿಕಾ ನಿರ್ಧಾರದಿಂದಾಗಿ ಬಾಲ ಮುದುರಿಕೊಂಡು ಮೂಲೆಯಲ್ಲಿದ್ದ ತಾಲಿಬಾನಿಗಳು ಇಡಿ ಅಫ್ಗಾನ್ ದೇಶವನ್ನೇ ಸ್ಮಶಾಣ ಮಾಡಿ ಜನರಿಗೆ ನರಕ ದರ್ಶನ ಮಾಡಿಸುತ್ತಿದ್ದಾರೆ.. ಮತ್ತೊಂದೆಡೆ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ರೆ, ಲೆಕ್ಕವಿಲ್ಲದಷ್ಟು ಮಂದಿ ತುತ್ತು ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿಯ ನಡುವೆ , ಅನೇಕರು ಗಾಯಗೊಂಡಿದ್ದಾರೆ.. ಕೆಲವರ ಸ್ಥಿತಿ ಶೋಚನೀಯವಾಗಿದೆ.. ಆದ್ರೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ.. ಔಷಧ ಪರಿಕರವಿಲ್ಲ.
ಅಫ್ಗಾನ್ : ಅಮೆರಿಕಾಗೆ ಎಚ್ಚರಿಕೆ ಕೊಟ್ಟ ತಾಲೀಬಾನಿಗಳು..!
ಆದ್ರೆ ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಬಿಗಿ ನಿರ್ಬಂಧದ ಕಾರಣ ಅಫ್ಗಾನಿಸ್ತಾನಕ್ಕೆ ಈ ವಾರ 500 ಟನ್ ವೈದ್ಯಕೀಯ ನೆರವು ಪೂರೈಸಲು ಆಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಶಸ್ತ್ರಚಿಕಿತ್ಸಾ ಪರಿಕರಗಳು, ನ್ಯುಮೋನಿಯ ಚಿಕಿತ್ಸೆಗೆ ನೀಡುವ ಔಷಧಗಳನ್ನು ಈ ವಾರ ಪೂರೈಕೆ ಮಾಡಬೇಕಿತ್ತು. ಆದರೆ, ಕಾಬೂಲ್‌ನಲ್ಲಿ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ನಿರ್ಬಂಧ ಇದೆ. ಈ ಕಾರಣ ಪೂರೈಕೆಯಲ್ಲಿ ಇನ್ನಷ್ಟು ವಿಳಂಬವಾಗಬಹುದು ಎಂದು WHO ವಕ್ತಾರ ಇನಾಸ್ ಹಮಾಮ್ ತಿಳಿಸಿದ್ದಾರೆ. ದುಬೈನಲ್ಲಿ ಇರುವ ತನ್ನ ದಾಸ್ತಾನು ತಾಣಕ್ಕೆ ಈಗ ಈ ಔಷಧೀಯ ಪರಿಕರಗಳನ್ನು ಪೂರೈಸಲು ಖಾಲಿ ವಿಮಾನವನ್ನು ವ್ಯವಸ್ಥೆ ಮಾಡಲು ಕ್ರಮವಹಿಸಲಾಗಿದೆ ಎಂದು ಅವರು ತಿಳಿಸಿದರು.








