ತಾಲಿಬಾನಿಗಳಿಗೂ ಹಿಂದೂ ಟೆರರಿಸಮ್ ಗೂ ಹೆಚ್ಚು ವ್ಯತ್ಯಾಸವಿಲ್ಲ ಎಂದವರಿಗೆ ತಿರುಗೇಟು ನೀಡಿದ ಪ್ರಣಿತಾ..!
ಇಡೀ ಅಫ್ಗಾನ್ ಅನ್ನೇ ಸ್ಮಶಾಣದಂತೆ ಮಾಡಿ ಹೆಣಗಳ ರಾಶಿಗಳ ಮೇಲೆ ಸಾಮ್ರಾಜ್ಯಕಟ್ಟುಕೊಂಡು ಅಕ್ಷರಸಹ ಅಲ್ಲಿನ ಜನರಿಗೆ ನರಕ ದರ್ಶನ ಮಾಡಿಸುತ್ತಿರುವ ತಾಲಿಬಾನರು ಸದ್ಯ ಅಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ.. ಈ ನಡುವೆ ಇಡೀ ವಿಶ್ವಾದ್ಯಂತ ಅಫ್ಗಾನ್ ನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳ ಬಗ್ಗೆಯೇ ಚರ್ಚೆಯಾಗ್ತಿದೆ. ಅಂತೆಯೇ ಬಾರತದಲ್ಲೂ ಕೂಡ. ಆದ್ರೆ ಇತ್ತೀಚೆಗೆ ಕೆಲವರು ಭಾರತದಲ್ಲಿ ಹಿಂದು ಟೆರರಿಸಮ್ ಇದೆ ಎಂಬ ಹೇಳಿಕೆಗಳನ್ನ ನೀಡುತ್ತಾ ಅಫ್ಗಾನ್ ನ ವಿದ್ಯಮಾನಗಳಿಗೆ ಭಾರತವನ್ನು ಹೋಲಿಸಿ ಮಾತನಾಡಿದ್ದಾರೆ.. ಇದು ಬಾರತೀಯರು ಅನೇಕ ಸೆಲೆಬ್ರಿಟಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಕಾಂಟ್ರವರ್ಸಿ ಕ್ವೀನ್ ಕಂಗನಾ ಡೇಟಿಂಗ್ ಮಾಡ್ತಿರೋದು ಯಾರ ಜೊತೆ ಗೊತ್ತಾ..?
ಇಂತಹ ಹೇಳಿಕೆಗಳಿಗೆ ಸ್ಯಾಂಡಲ್ ವುಡ್ ನಟಿ ಪ್ರಣೀತಾ ಖಾರವಾಗಿ ತಿರುಗೇಟು ನೀಡಿದ್ದಾರೆ. ಹೌದು ಭಾರತದಲ್ಲಿ ಹಿಂದೂ ಟೆರರ್ ಇದೆ. ತಾಲಿಬಾನಿಗಳಿಗೂ ಹಿಂದೂ ಟೆರರಿಸಮ್ ಗೂ ಹೆಚ್ಚು ವ್ಯತ್ಯಾಸವಿಲ್ಲ ಎಂದವರಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಣಿತಾ “ಅಫ್ಗಾನ್ ನಲ್ಲಿ ನಡೆಯುತ್ತಿರುವ ವಿದ್ವಂಸಕ ಕೃತ್ಯಗಳ ಬಗ್ಗೆ ಮರೆಮಾಚುವ ತಂತ್ರವಿದು. ಕೆಲವರು ತಮ್ಮನ್ನ ಸಮರ್ಥನೆ ಮಾಡಿಕೊಳ್ಳುವುದಕ್ಕಾಗಿ ಹಿಂದೂಗಳು ಟೆರರ್ ಅನ್ನೋ ಪದ ಬಳಸುತ್ತಿದ್ದಾರೆ. ಆದ್ರೆ ಪರಿಕಲ್ಪನೆಯನ್ನೇ ನ್ಯಾಯಸಮ್ಮತಗೊಳಿಸುವ ಪ್ರಯತ್ನಗಳು ಅವರ ಕಲ್ಪನೆಯಾಗಿಯೇ ಉಳಿಯುತ್ತದೆ. ಭಾರತೀಯರೇ ಎಚ್ಚರ ಶತ್ರುಗಳು ನಮ್ಮ ಗಡಿಯಾಚೆ ಅಷ್ಟೇ ಅಲ್ಲ ನಮ್ಮ ಸುತ್ತಮುತ್ತಲೂ ಇದ್ದಾರೆ” ಎಂದಿದ್ದಾರೆ. ಪ್ರಣಿತಾ ಟ್ವೀಟ್ ಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ.. ಮೆಚ್ಚುಗೆಯ ಮಹಾಪೂರವೇ ಹರಿದುಬರ್ತಾಯಿದೆ.